alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದಿನಲ್ಲಿ ಆರಂಭವಾಯ್ತು ‘ಬಟ್ಟೆಗಳ ಬ್ಯಾಂಕ್’

cloth bankದೇಶದಲ್ಲಿ ಶ್ರೀಮಂತ ಹಾಗೂ ಬಡವರ ನಡುವೆ ಅಂತರ ಹೆಚ್ಚಾಗುತ್ತಿದೆ. ಶ್ರೀಮಂತರ ಸಂಪತ್ತಿನಲ್ಲಿ ಹೆಚ್ಚಳವಾಗುತ್ತಿದ್ದರೆ ಕಡು ಬಡವರು ಒಪ್ಪೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಆಹಾರ, ಬಟ್ಟೆ, ಮನೆ ಎಲ್ಲರಿಗೂ ಲಭ್ಯವಾಗಬೇಕಾದ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ಸಂಘಟನೆಯೊಂದು ಶ್ಲಾಘನೀಯ ಕಾರ್ಯ ಆರಂಭಿಸಿದೆ.

ಬಡ ಜನರಿಗೆ ನೆರವಾಗಲೆಂದೇ ಹೈದರಾಬಾದಿನಲ್ಲಿ ‘ಕ್ಲಾತ್ಸ್ ಬ್ಯಾಂಕ್’ ಆರಂಭಿಸಲಾಗಿದ್ದು, ಇಲ್ಲಿ ಬಟ್ಟೆಗಳು ಮಾತ್ರವಲ್ಲದೇ ಪಾದರಕ್ಷೆ ಹಾಗೂ ಪುಟ್ಟ ಮಕ್ಕಳಿಗೆ ಅಟಿಕೆಗಳನ್ನೂ ಇಡಲಾಗುತ್ತಿದೆ. ಬಡ ಜನತೆ ಇಲ್ಲಿಗೆ ಬಂದು ತಮಗೆ ಬೇಕಾದ್ದನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ.

ಈ ಹಿಂದೆ ಮಹಾರಾಷ್ಟ್ರದಲ್ಲೂ ಸ್ವಯಂ ಸೇವಾ ಸಂಘಟನೆಯೊಂದು ‘ರೋಟಿ ಬ್ಯಾಂಕ್’ ಆರಂಭಿಸಿದ್ದು, ಬಡವರು ಇಲ್ಲಿಗೆ ಬಂದು ಉಚಿತ ಆಹಾರ ಪಡೆಯಬಹುದಾಗಿದೆ. ಔರಾಂಗಾಬಾದ್ ನಲ್ಲಿ ಆರಂಭಗೊಂಡಿದ್ದ ‘ರೋಟಿ ಬ್ಯಾಂಕ್’ ಹಾಗೂ ‘ಕ್ಲಾತ್ಸ್ ಬ್ಯಾಂಕ್’ ಮಾದರಿಯಲ್ಲಿ ಹೈದರಾಬಾದಿನಲ್ಲೂ ‘ಕ್ಲಾತ್ಸ್ ಬ್ಯಾಂಕ್’ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ‘ರೋಟಿ ಬ್ಯಾಂಕ್’ ಆರಂಭಿಸಲು ಚಿಂತನೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...