alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಧ್ರದಲ್ಲಿ ಆರಂಭವಾಯ್ತು ಅಣ್ಣಾ ಕ್ಯಾಂಟೀನ್

canteen

ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಅಣ್ಣಾ ಕ್ಯಾಂಟೀನ್ ಆರಂಭವಾಗಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು, ಅಮ್ಮ ಕ್ಯಾಂಟೀನ್ ಆರಂಭಿಸಿದ್ದು, ಕಡಿಮೆ ಬೆಲೆಯಲ್ಲಿ ತಿಂಡಿ ತಿನಿಸು ಸಿಗುತ್ತಿದೆ.

ಇದೇ ಮಾದರಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಅಣ್ಣಾ ಎನ್.ಟಿ.ಆರ್. ಕ್ಯಾಂಟೀನ್ ಆರಂಭಿಸಿದ್ದಾರೆ. ಕಡಿಮೆ ಬೆಲೆಯಲ್ಲಿ ನೌಕರರಿಗೆ ಹಾಗೂ ಬಡ ಜನತೆಗೆ ತಿಂಡಿ ತಿನಿಸು ನೀಡಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಇದನ್ನು ವಿಸ್ತರಿಸುವ ಯೋಜನೆ ಇದೆ ಎಂದು ಹೇಳಲಾಗಿದೆ. ಚಂದ್ರಬಾಬು ನಾಯ್ಡು ಅವರು, ಅಣ್ಣಾ ಎನ್.ಟಿ.ಆರ್. ಮೊದಲ ಕ್ಯಾಂಟೀನ್ ಅನ್ನು ಹೊಸ ರಾಜಧಾನಿ ಅಮರಾವತಿ ಸಮೀಪದ ವೆಲಗವಾಡಿ ಸೆಕ್ರೆಟರಿ ಸಂಕೀರ್ಣದಲ್ಲಿ ಉದ್ಘಾಟಿಸಿದ್ದಾರೆ.

ಅಣ್ಣಾ ಎನ್.ಟಿ.ಆರ್.ಕ್ಯಾಂಟೀನ್ ನಲ್ಲಿ 5 ರೂಪಾಯಿಯಲ್ಲಿ ಇಡ್ಲಿ, ಉಪ್ಪಿಟ್ಟು, ಪೊಂಗಲ್ ನೀಡಲಾಗುವುದು. 7.50 ರೂಪಾಯಿಗೆ 2 ಚಪಾತಿ, ಅನ್ನ ಒಳಗೊಂಡ ಊಟ ನೀಡಲಾಗುವುದು. ರಾಜಧಾನಿಯಲ್ಲಿ ಕೆಲಸಕ್ಕೆ ಆಗಮಿಸುವ ನೌಕರರಿಗೆ ಈ ಯೋಜನೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಕಡೆ ಇದನ್ನು ಆರಂಭಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...