alex Certify
ಕನ್ನಡ ದುನಿಯಾ       Mobile App
       

Kannada Duniya

ಮರಿ ಮೊಮ್ಮಕ್ಕಳ ಸಮ್ಮುಖದಲ್ಲಿ ನೆರವೇರಿದೆ 80 ವರ್ಷದ ವೃದ್ದನ ಮದುವೆ

ತಾನು ಪ್ರೀತಿಸಿದಾಕೆಯೊಂದಿಗೆ ಕಳೆದ 48 ವರ್ಷಗಳಿಂದ ಲಿವ್ ಇನ್ ರಿಲೇಶನ್ ನಲ್ಲಿದ್ದ 80 ವರ್ಷದ ವೃದ್ದರೊಬ್ಬರ ವಿವಾಹ ಮೊದಲ ಪತ್ನಿಯ ಸಮ್ಮತಿಯೊಂದಿಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ.

ಉದಯ್ಪುರದ ಪರ್ಗಿಯಾಪಾಡಾ ಗ್ರಾಮದಲ್ಲಿ ಮಂಗಳವಾರದಂದು ಈ ಅಪರೂಪದ ವಿವಾಹ ನೆರವೇರಿದ್ದು, 80 ವರ್ಷದ ದೇವದಾಸ್ 76 ವರ್ಷದ ಮಗ್ದುಬಾಯಿ ಕೈ ಹಿಡಿದಿದ್ದಾರೆ. ಈ ವಿವಾಹಕ್ಕೆ ದೇವದಾಸ್ ಕುಟುಂಬಸ್ಥರು ಮಾತ್ರವಲ್ಲದೇ ಗ್ರಾಮಸ್ಥರೂ ಸಾಕ್ಷಿಯಾಗಿದ್ದಾರೆ.

ಈ ಮೊದಲೇ ಚಂಪಾಬಾಯಿ ಎಂಬಾಕೆಯೊಂದಿಗೆ ಮದುವೆಯಾಗಿದ್ದ ದೇವದಾಸ್, 48 ವರ್ಷದ ಹಿಂದೆ ತಾನು ಪ್ರೀತಿಸುತ್ತಿದ್ದ ಪಕ್ಕದ ಗ್ರಾಮದ ಮಗ್ದುಬಾಯಿಯೊಂದಿಗೆ ಪರಾರಿಯಾಗಿದ್ದು, ಬಳಿಕ ತನ್ನ ಗ್ರಾಮದಲ್ಲಿ ಆಕೆಯೊಂದಿಗೆ ಬಂದು ನೆಲೆಸಿದ್ದ. ಚಂಪಾಬಾಯಿ ಮಕ್ಕಳ ಮನೆಗೆ ತೆರಳಿದ ಬಳಿಕ ತನ್ನ ಪೂರ್ವಿಕರ ಮನೆಯಲ್ಲಿ ದೇವದಾಸ್, ಮಗ್ದುಬಾಯಿ ಜೊತೆ ವಾಸವಾಗಿದ್ದ.

ಆದರೆ ಇಬ್ಬರ ಸಹ ಜೀವನಕ್ಕೆ ಸಂಪ್ರದಾಯದ ಪ್ರಕಾರ ಮಾನ್ಯತೆಯಿಲ್ಲವಾಗಿದ್ದು, ಈ ಹಿನ್ನಲೆಯಲ್ಲಿ ತಮ್ಮ ಮಲತಾಯಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ದೇವದಾಸ್ ಮಕ್ಕಳು ಮುಂದಾಗಿದ್ದಾರೆ. ದೇವದಾಸ್ ನ ಪತ್ನಿ ಚಂಪಾಬಾಯಿ ಕೂಡಾ ಈ ವಿವಾಹಕ್ಕೆ ಒಪ್ಪಿಗೆ ನೀಡಿದ್ದು, ದೇವದಾಸ್ ಮತ್ತು ಮಗ್ದುಬಾಯಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದೇವದಾಸ್ ಗೆ ಈಗಾಗಲೇ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳಿದ್ದು, ಇವರೆಲ್ಲರ ಸಮ್ಮುಖದಲ್ಲೇ ಈ ವಿವಾಹ ನೆರವೇರಿದೆ. ಅನಾರೋಗ್ಯದ ಕಾರಣಕ್ಕೆ ದೇವದಾಸ್ ನ ಮೊದಲ ಪತ್ನಿ ಚಂಪಾಬಾಯಿ ವಿವಾಹ ಸಮಾರಂಭದಲ್ಲಿ ಹಾಜರಿರಲಿಲ್ಲವೆನ್ನಲಾಗಿದ್ದು, ವಿವಾಹದ ಬಳಿಕ ಗ್ರಾಮಸ್ಥರಿಗೆ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...