alex Certify
ಕನ್ನಡ ದುನಿಯಾ       Mobile App
       

Kannada Duniya

34 ವರ್ಷಗಳ ಬಳಿಕ ಬಹಿರಂಗವಾಯಿತು ಬೆಚ್ಚಿಬೀಳಿಸುವ ಸತ್ಯ…!

ಮಧ್ಯಪ್ರದೇಶದ ಅನುಪುರ್ ಜಿಲ್ಲೆಯ ಚುಲ್ಕಾರಿ ಗ್ರಾಮದಲ್ಲಿ 34 ವರ್ಷಗಳ ಬಳಿಕ ಬೆಳಕಿಗೆ ಬಂದಿರುವ ಸತ್ಯವೊಂದು ಗ್ರಾಮಸ್ಥರನ್ನು ಮಾತ್ರವಲ್ಲದೆ ಸರ್ಕಾರಿ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ಮಸೇನ್ ಕೀವತ್ ಎಂಬಾತ ತನ್ನದೇ ಗ್ರಾಮದ ಜಗನ್ನಾಥ್ ಕೀವತ್ ಎಂಬಾತನ ಹೆಸರಿನಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಲ್ಲದೆ ಈಗ ನಿವೃತ್ತಿ ವೇತನವನ್ನು ಪಡೆಯುತ್ತಿದ್ದು, ಕೊನೆಗೂ ಸತ್ಯ ಬಹಿರಂಗವಾಗಿದೆ.

ನಿವೃತ್ತಿ ಸಂದರ್ಭದಲ್ಲಿ ಈತನ ವೇತನ 52,708 ರೂ. ಗಳೆಂದು ಹೇಳಲಾಗಿದ್ದು, ನಿವೃತ್ತಿ ನಂತರ ಅದಕ್ಕೆ ತಕ್ಕನಾಗಿ ನಿವೃತ್ತಿ ವೇತನ ಪಡೆಯುತ್ತಿದ್ದನೆಂದು ತಿಳಿದು ಬಂದಿದೆ.

ಜಗನ್ನಾಥ್ ಕೀವತ್ ಹೆಸರಿನಲ್ಲಿಯೇ ಭೀಮಸೇನ್ ಕೀವತ್ ಆಧಾರ್ ಕಾರ್ಡ್ ಕೂಡ ಮಾಡಿಸಿದ್ದು, ಆದರೆ ತನ್ನ ಪೂರ್ವಿಕರ ಆಸ್ತಿ ಪಡೆಯಲು ನಿಜವಾದ ಹೆಸರಿನಲ್ಲಿ ವ್ಯವಹರಿಸಿದ್ದು, ವಂಚಕನ ಬಣ್ಣ ಬಯಲಾಗಲು ಕಾರಣವಾಗಿದೆ.

ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...