alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷಗಳಿಗೊಮ್ಮೆ ಸಂಭವಿಸುವ ದೃಶ್ಯ ವೈಭವ ಕಣ್ತುಂಬಿಕೊಳ್ಳಲು ದಿನಗಣನೆ ಆರಂಭ

ಮುನ್ನಾರ್ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಕೇರಳದ ಪ್ರಸಿದ್ಧ ತಾಣ, ಪ್ರವಾಸಿಗರಿಗೆ ದೃಶ್ಯ ಕಾವ್ಯ. ಎಸ್….ಆಗಸದಿಂದ ಹಿಡಿದು ಗುಡ್ಡಗಾಡು ಪ್ರದೇಶಗಳು ಸಹಿತ ನೀಲಿ. ಈ ದೃಶ್ಯ ವೈಭವ 12 ವರ್ಷಕ್ಕೊಮ್ಮೆ, ನಡೆಯುತ್ತದೆ. ಈ ಸುಂದರ ರಸಮಯ ಘಳಿಗೆಗೆ ಈಗ ದಿನಗಣನೆ ಆರಂಭವಾಗಿದೆ.

ಅಪರೂಪದ ಹೂಗಳು, ಗುಡ್ಡಕ್ಕೆ ಹೊದಿಕೆ ಹಾಕಿದಂತೆ ಕಾಣುತ್ತದೆ. ಈ ಕ್ಷಣಗಳನ್ನು ಕಣ್ಣು ತುಂಬಿಕೊಳ್ಳೋಕೆ ಮುನ್ನಾರ್ ಗೆ ಭೇಟಿ ನೀಡಬೇಕು. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳನ್ನು ತನ್ನ ಒಡಲಲ್ಲಿ ಹೊಂದಿರುವ ಕೇರಳ, ಜುಲೈ ತಿಂಗಳಿನಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

12 ವರ್ಷಕ್ಕೆ ಒಮ್ಮೆ ಬಿಡುವ ಈ ಹೂಗಳಿಗೆ ನೀಲಕುರಿಂಜಿ ಎಂದು ಹೆಸರು. ಈ ಹೂಗಳು ಬಿಟ್ಟಾಗ ನೋಡೋದೆ ಕಣ್ಣಿಗೆ ಹಬ್ಬ. ಮುನ್ನಾರ್ ನ ನಿಜ ಪರಿಚಯ ನಿಮಗೆ ಆಗಬೇಕಾದಲ್ಲಿ, ನೀವು ಈ ಸ್ಥಳಕ್ಕೆ ಭೇಟಿ ನೀಡಬೇಕು. ಈ ಹೂಗಳು ಜುಲೈನಲ್ಲಿ ಬಿಡಲು ಆರಂಭಿಸಿ, ಅಕ್ಟೋಬರ್ ವರೆಗೂ ತಮ್ಮ ಕಂಪನ್ನು ಸೂಸುತ್ತವೆ.

2006 ರಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಸುಮಾರು 3 ಲಕ್ಷ ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸಿದ್ದರು. ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಆಗಲಿದೆ. ಕೇರಳ ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದಂತೆ ಈ ಬಾರಿ ಸುಮಾರು 8 ಲಕ್ಷ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುವ ಅಂದಾಜಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...