alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಡ್ರೋನ್ ಬಳಕೆ

ಉತ್ತರ ಪ್ರದೇಶದ ಸೀತಾಪುರದಲ್ಲೀಗ ನಾಯಿಗಳದ್ದೇ ಹಾವಳಿಯಾಗಿದೆ. ಆಹಾರಕ್ಕಾಗಿ ಹಿಂಸಾತ್ಮಕ ಪ್ರವೃತ್ತಿ ತಾಳಿರುವ ನಾಯಿಗಳು ಕಳೆದ 6 ತಿಂಗಳಲ್ಲಿ 12 ಮಕ್ಕಳನ್ನು ಕಚ್ಚಿ ಸಾಯಿಸಿವೆ. ನಾಯಿಗಳ ದಾಳಿಯಿಂದ ಸಾಕಷ್ಟು ಜನರಿಗೆ ಗಂಭೀರ ಗಾಯಗಳಾಗಿವೆ.

ಈ ಹಿಂಸಾತ್ಮಕ ಪ್ರವೃತ್ತಿಯ ಕಾಡು ನಾಯಿಗಳಿಗೆ ಹೆದರಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ. ಇನ್ನೂ ಕೆಲವರು ಊರನ್ನೇ ಬಿಟ್ಟು ಬೇರೆ ಊರಿಗೆ ಗುಳೆ ಹೋಗುತ್ತಿದ್ದಾರೆ. ಈ ನಾಯಿಗಳನ್ನು ಹಿಡಿಯಲು ಹೋಗಿದ್ದ ತಂಡವೊಂದರ 8-10 ಜನರಿಗೂ ನಾಯಿಗಳು ಕಚ್ಚಿ ಗಾಯಗೊಳಿಸಿವೆ.

ನಾಯಿಗಳನ್ನು ಹಿಡಿಯಲು ಲಕ್ನೋ ಹಾಗೂ ಮಥುರಾದಿಂದ ವಿಶೇಷ ತಂಡವನ್ನು ಕರೆಯಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಡ್ರೋನ್ ಕ್ಯಾಮರಾಗಳನ್ನು ಸೀತಾಪುರಕ್ಕೆ ಕಳುಹಿಸಲಾಗಿದೆ. ಜಿಲ್ಲಾಡಳಿತದೊಂದಿಗೆ ಸೇರಿ ನಾಯಿಗಳನ್ನು ಹಿಡಿಯುವ ಕಾರ್ಯ ಮಾಡಲಾಗುತ್ತದೆ ಎಂದು ಲಕ್ನೋದ ಐಜಿ ಸುಜಿತ್ ಕುಮಾರ್ ಹೇಳಿದ್ದಾರೆ.  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...