alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರವೆಸಗಿದ್ದ ಆರೋಪಿಗಳಿಗೆ ನ್ಯಾಯಾಲಯದಲ್ಲೇ ಹಿಗ್ಗಾಮುಗ್ಗಾ ಥಳಿತ

ಚೆನ್ನೈ: ಚೆನ್ನೈನ ಮಹಿಳಾ ಕೋರ್ಟ್ ನ ನ್ಯಾಯವಾದಿಗಳು 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 17 ಮಂದಿ ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಿವಿ ಕೇಳದ ಬಾಲಕಿಯನ್ನು ಕಳೆದ 7 ತಿಂಗಳಿನಿಂದ ಅಪಾರ್ಟ್‌ಮೆಂಟ್‌ ನ ನಿರ್ವಹಣೆಗಾಗಿ ಇರುವ ಸೆಕ್ಯುರಿಟಿ, ಎಲೆಕ್ಟ್ರಿಷಿಯನ್‌, ಲಿಫ್ಟ್‌ ಆಪರೇಟರ್‌ಗಳು ಲೈಂಗಿಕ ಕಿರುಕುಳ ನೀಡಿದ್ದು, ಈಗ ಎಲ್ಲರೂ ಬಂಧನಕ್ಕೊಳಗಾಗಿದ್ದಾರೆ.

ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು 17 ಮಂದಿಯನ್ನು ಬಂಧಿಸಿ, ಮಹಿಳಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಸುಮಾರು 50 ಕ್ಕೂ ಅಧಿಕ ನ್ಯಾಯವಾದಿಗಳು ಆಕ್ರೋಶಭರಿತರಾಗಿ ಆರೋಪಿಗಳ ಮೇಲೆರಗಿದ್ದು, ಮನಬಂದಂತೆ ಥಳಿಸಿದ್ದಾರೆ. ಎಲ್ಲ ಆರೋಪಿಗಳ ಮೇಲೂ ಪೋಕ್ಸೋ ಕಾಯ್ದೆ ಅಡಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡಿನ ಪುರಸವಲ್ಕಮ್‌ ನ ಅಪಾರ್ಟ್‌ಮೆಂಟ್‌ ನಲ್ಲಿ ವಾಸವಿದ್ದ 12 ವರ್ಷದ ಬಾಲಕಿಗೆ ಕಳೆದ 7 ತಿಂಗಳಿನಿಂದ ಮತ್ತು ಬರುವ ಔಷಧಿಗಳನ್ನು ನೀಡಿ, ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ಕೃತ್ಯವನ್ನು ವಿಡಿಯೋ ಮಾಡಿರುವ ಆರೋಪಿಗಳು ಈ ವಿಚಾರ ಯಾರಿಗಾದರೂ ಹೇಳಿದರೆ, ವಿಡಿಯೋವನ್ನು ಎಲ್ಲರಿಗೂ ಕಳುಹಿಸುವುದಾಗಿ ಧಮಕಿ ಹಾಕಿದ್ದರು. ಬಾಲಕಿ ತಾಯಿ ಈ ಕುರಿತು ಅನುಮಾನಗೊಂಡು, ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...