alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದರಾ ಬಿಜೆಪಿ ಭೀಷ್ಮ?

2019 ರ ಲೋಕಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ ಅಂದ್ರೆ ತಪ್ಪಾಗಲಾರದು. ಪ್ರಧಾನಿ ಗದ್ದುಗೆಗೆ ಈಗಾಗಲೇ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಅನ್ನುವ ಮಾತು ಹರಿದಾಡುತ್ತಿವೆ. ಆದರೆ ಇದು ಅಕ್ಷರಶಃ ಸತ್ಯ. ಬಲ್ಲ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆ ಅವರನ್ನು ಭೇಟಿ ಮಾಡಿ ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಭೀಷ್ಮನಿಗೆ ಸಾಥ್ ನೀಡಲಿದ್ದಾರಾ ಸಂಸದ ಮುರಳಿ ಮನೋಹರ್ ಜೋಶಿ…?

ಉತ್ತರ ಪ್ರದೇಶದ ಕಾನ್ಪುರ್ ಕ್ಷೇತ್ರದ ಸಂಸದರಾಗಿರುವ ಡಾ. ಮುರಳಿ ಮನೋಹರ್ ಜೋಶಿ ಅವರು ಸಹ ಈ ಬಾರಿ ಅಖಾಡಕ್ಕಿಳಿಯಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ಇಡೀ ಭಾರತದಾದ್ಯಂತ ಕಮಲ ಅರಳಿಸಿ ಕೇಸರಿ ಧ್ವಜ ಹಾರಿಸಿಬೇಕೆಂಬುದು ಚಾಣಕ್ಯ ಅಮಿತ್ ಶಾ ಪ್ಲಾನ್. ಗುಜರಾತ್ ​ನ ಗಾಂಧಿನಗರ ಕ್ಷೇತ್ರದಿಂದ ಅಡ್ವಾಣಿ ಹಾಗೂ ಕಾನ್ಪುರ್ ಕ್ಷೇತ್ರದಿಂದ ಮುರಳಿ ಮನೋಹರ್ ಜೋಶಿ ಪ್ರತಿನಿಧಿಸುತ್ತಿದ್ದಾರೆ.

ವರ್ಕ್ ಔಟ್ ಆಗುತ್ತಾ ಮೋದಿ-ಶಾ ಮಾಸ್ಟರ್ ಪ್ಲಾನ್….?

2014 ರ ಲೋಕಸಭಾ ಚುನಾವಣೆ ಬಳಿಕ 75 ವರ್ಷ ಮೀರಿದ ನಾಯಕರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗಿಲ್ಲ ಮತ್ತು ‘ಮಾರ್ಗದರ್ಶಿ ಮಂಡಲ್‌’ ಎಂಬ ಸಮಿತಿ ರಚಿಸಿ ಆಡ್ವಾಣಿ, ಜೋಶಿ ಮತ್ತು ಇತರ ನಾಯಕರನ್ನು ಮೂಲೆಗುಂಪು ಮಾಡಲಾಗಿತ್ತು. ಇದನ್ನು ಸ್ವತಃ ಅಡ್ವಾಣಿ ಅವರೇ ಮಾಧ್ಯಮದೆದುರು ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ ಇದನ್ನು ತಳ್ಳಿಹಾಕಲು ಅಮಿತ್ ಶಾ ಹೊಸ ತಂತ್ರ ರೂಪಿಸಿದ್ದಾರಾ ಅನ್ನೋದು ಕುತೂಹಲ ಮೂಡಿಸಿದೆ. ಇನ್ನು, ಮೋದಿ-ಶಾ ಅವರ ಈ ಮನವಿಗೆ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರು ಕಿವಿಗೊಡುತ್ತಾರಾ ಎಂಬುದು ಕುತೂಹಲಕಾರಿ ಸಂಗತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...