alex Certify
ಕನ್ನಡ ದುನಿಯಾ       Mobile App
       

Kannada Duniya

”ಪತಿ ವಯಸ್ಸು ಕಡಿಮೆ ಇದ್ರೆ ಪತ್ನಿ ಜೊತೆ ಲಿವ್ ಇನ್ ನಲ್ಲಿರಬಹುದು”

ಹದಿಯಾ ಪ್ರಕರಣ ನಂತ್ರ ಸುಪ್ರೀಂ ಕೋರ್ಟ್, ಕೇರಳ ಹೈಕೋರ್ಟ್ ನ ಇನ್ನೊಂದು ತೀರ್ಪನ್ನು ಅನೂರ್ಜಿತಗೊಳಿಸಿದೆ. ಪತಿ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿದ್ದಲ್ಲಿ ಪತಿ, ಪತ್ನಿ ಜೊತೆ ಲಿವ್ ಇನ್ ನಲ್ಲಿರಬಹುದು ಎಂದು ಕೋರ್ಟ್ ತೀರ್ಪು ನೀಡಿದೆ. 20 ವರ್ಷದ ತುಷಾರಾಳಿಗೆ ಪತಿ ಅಥವಾ ಕುಟುಂಬಸ್ಥರಲ್ಲಿ ಯಾರ ಜೊತೆಯಾದ್ರೂ ವಾಸ ಮಾಡಬಹುದು. ಇದು ನಿನ್ನ ನಿರ್ಧಾರ ಎಂದು ಕೋರ್ಟ್ ಹೇಳಿದೆ.

ಕೇರಳದಲ್ಲಿ ಕಳೆದ ವರ್ಷ ಏಪ್ರಿಲ್ ನಲ್ಲಿ 19 ವರ್ಷದ ತುಷಾರಾ 20 ವರ್ಷದ ನಂದಕುಮಾರ್ ಜೊತೆ ಮದುವೆಯಾಗಿದ್ದಳು. ಹಿಂದೂ ಮದುವೆ ಕಾಯ್ದೆಯಡಿ ವರನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿತ್ತು. ಇದಾದ ನಂತ್ರ ಹುಡುಗಿ ತಂದೆ, ಹುಡುಗನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದ. ಮದುವೆ ರದ್ದು ಮಾಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.

ಮದುವೆ ವೇಳೆ ಹುಡುಗನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿತ್ತು. ಹಾಗಾಗಿ ಮದುವೆ ರದ್ದು ಮಾಡಬೇಕೆಂದು ಹುಡುಗಿ ತಂದೆ ಕೋರಿದ್ದ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮದುವೆ ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಹುಡುಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣೆ ನಡೆಸಿದ ಕೋರ್ಟ್ ಕೇರಳ ಹೈಕೋರ್ಟ್ ತೀರ್ಪನ್ನು ಅನೂರ್ಜಿತಗೊಳಿಸಿದೆ. ಹುಡುಗನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿದ್ದರೆ ಪತ್ನಿ ಜೊತೆ ಹುಡುಗ ಲಿವ್ ಇನ್ ನಲ್ಲಿರಬಹುದು. ಮದುವೆ ರದ್ದು ಮಾಡಲು ಸಾಧ್ಯವಿಲ್ಲ ಎಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...