alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಜಾಹೀರಾತಿನ ಬಗ್ಗೆ ಸರ್ಕಾರ ಹೇಳಿದ್ದೇನು?

ಮಾಹಿತಿ ಮತ್ತು ಪ್ರಸಾರ ಇಲಾಖೆ ಕಾಂಡೋಮ್ ಜಾಹೀರಾತಿಗೆ ಹಗಲಿನಲ್ಲಿ ನಿಷೇಧ ಹೇರಿರುವುದು ವಿವಾದಕ್ಕೆ ಕಾರಣವಾಗಿದೆ. ಆರೋಪ-ಪ್ರತ್ಯಾರೋಪಗಳ ನಂತ್ರ ಸಚಿವಾಲಯ ನಿಷೇಧಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದೆ.

ರಾಜಸ್ತಾನ ಹೈಕೋರ್ಟ್ ಕಾಂಡೋಮ್ ಜಾಹೀರಾತು ನಿಷೇಧದ ಬಗ್ಗೆ ಪ್ರಶ್ನೆ ಮಾಡಿ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿತ್ತು. ಇದಕ್ಕೀಗ ಮಾಹಿತಿ ಮತ್ತು ಪ್ರಸಾರ ಇಲಾಖೆ ಸ್ಪಷ್ಟೀಕರಣ ನೀಡಿದೆ. ಜಾಹೀರಾತಿನಲ್ಲಿ ಉತ್ತೇಜಕ ವಸ್ತುಗಳನ್ನು ತೋರಿಸಲಾಗಿದೆ. ಹಾಗಾಗಿ ಜಾಹೀರಾತಿಗೆ ನಿರ್ಬಂಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ.

ಜಾಹೀರಾತುಗಳು ಮಾಹಿತಿಯನ್ನು ರವಾನೆ ಮಾಡಬೇಕು. ಆದ್ರೆ ಈ ಕಾಂಡೋಮ್ ಜಾಹೀರಾತುಗಳಲ್ಲಿ ಉತ್ತೇಜಕ ವಿಷ್ಯವನ್ನು ತೋರಿಸಲಾಗಿದೆ. ಮಹಿಳೆಯರನ್ನು ಸೆಕ್ಸ್ ಉತ್ತೇಜಕ ಎಂಬಂತೆ ತೋರಿಸಲಾಗಿದೆ. ಕಾಮ ಪ್ರಚೋದಕ ವಿಷಯವನ್ನು ಜಾಹೀರಾತು ಒಳಗೊಂಡಿರದೆ ಹೋದಲ್ಲಿ ಕಾಂಡೋಮ್ ಜಾಹೀರಾತನ್ನು ಹಗಲಿನಲ್ಲಿ ತೋರಿಸಲು ಯಾವುದೇ ಅಭ್ಯಂತರವಿಲ್ಲವೆಂದು ಸಚಿವಾಲಯ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...