alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನೊಂದಿಗೆ ಸೇರಿ ಪತಿಯ ಕತ್ತು ಸೀಳಿದ ಪತ್ನಿ

ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಹಾಗೂ ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವನನ್ನು ಧರ್ಮಪಾಲ್‌ ಎಂದು ಗುರುತಿಸಲಾಗಿದೆ.

ಆ.5ರಂದು ನಿರ್ಮಾಣ ಹಂತದ ಕಟ್ಟಡದ ಕೆಳಗೆ ಕತ್ತು ಸೀಳಿದ ಸ್ಥಿತಿಯಲ್ಲಿ ಧರ್ಮಪಾಲ್‌ ಶವ ಸಿಕ್ಕಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು, ತನಿಖೆ ನಡೆಸಿದ್ದು, ಧರ್ಮಪಾಲ್‌ ಪತ್ನಿ ಉಮಾ ದೇವಿಗೆ ಉಸ್ಮಾನ್‌ ರಾಣಾ ಎಂಬವನೊಂದಿಗೆ ಅನೈತಿಕ ಸಂಬಂಧ ಇದ್ದುದು ಗೊತ್ತಾಗಿದೆ. ಅಲ್ಲದೆ, ಇವರಿಬ್ಬರೂ ಧರ್ಮಪಾಲ್‌ರನ್ನು ಕೊಲೆ ಮಾಡಲು ಸಂಚು ರೂಪಿಸಿದ ವಿಚಾರ ಬೆಳಕಿಗೆ ಬಂದಿದೆ. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.

ಆ.4ರಂದು ಧರ್ಮಪಾಲ್‌ಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ ಪತ್ನಿ ಉಮಾ, ಬಳಿಕ ಪ್ರಿಯಕರ ಉಸ್ಮಾನ್‌ ಜತೆ ಸೇರಿ ಧರ್ಮಪಾಲ್‌ನ ಕತ್ತು ಸೀಳಿದ್ದಾಳೆ. ಬಳಿಕ ನಿರ್ಮಾಣ ಹಂತದ ಕಟ್ಟಡದ ಬಳಿಕ ಶವ ಎಸೆದಿದ್ದಾರೆ. ಉಮಾ ಈ ಹಿಂದೆ ತನ್ನ ಮತ್ತೊಬ್ಬ ಪ್ರಿಯತಮನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, 5 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದಳು. ಆರೋಪಿಗಳು ಬಳಕೆ ಮಾಡಿರುವ ಕತ್ತಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...