alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್ ಕೇಸಲ್ಲಿ ಠಾಣೆಯಲ್ಲೇ ಅಮ್ಮನೊಂದಿಗೆ ನಟಿ ಜಟಾಪಟಿ !

Swathi-Reddy-Profile

ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಆಕೆಯ ಅಮ್ಮನಿಗೂ ಪೊಲೀಸ್ ಠಾಣೆಯಲ್ಲೇ ಜಟಾಪಟಿ ನಡೆದ ಘಟನೆ ಹೈದರಾಬಾದ್ ಬಂಜಾರ ಹಿಲ್ಸ್ ನಲ್ಲಿ ನಡೆದಿದೆ. ತೆಲುಗು ಚಿತ್ರರಂಗದ ಉದಯೋನ್ಮುಖ ನಟಿ ಸ್ವಾತಿ ರೆಡ್ಡಿ ಗಲಾಟೆಗೆ ಕಾರಣರಾದವರು.

ಟಾಲಿವುಡ್ ನಟಿ ಸ್ವಾತಿ ರೆಡ್ಡಿ ಅವರಿಗೆ ಕುಟುಂಬದ ಪರಿಚಯಸ್ಥನಾಗಿದ್ದ ಉದ್ಯಮಿ ಶ್ರೀನಿವಾಸ್ ಎಂಬಾತ ವಂಚಿಸಿದ್ದಾನೆ ಎಂದು ಆಕೆಯ ಅಮ್ಮ ಪೊಲೀಸರಿಗೆ ದೂರು ನೀಡಿದ್ದರು. ಸ್ವಾತಿ ರೆಡ್ಡಿಯನ್ನು ಪ್ರೀತಿಸುತ್ತಿದ್ದ ಶ್ರೀನಿವಾಸ್ ಈಗ ದೂರವಾಗುತ್ತಿದ್ದಾನೆ ಎಂದು ತಾಯಿ ದೂರಿದ್ದರಿಂದ ಬಂಜಾರ ಹಿಲ್ಸ್ ಠಾಣೆ ಪೊಲೀಸರು ಸ್ವಾತಿ ರೆಡ್ಡಿ ಹಾಗೂ ಆಕೆಯ ತಾಯಿಯನ್ನು ಠಾಣೆಗೆ ಬರುವಂತೆ ತಿಳಿಸಿದ್ದರು. ಠಾಣೆಗೆ ಬಂದಿದ್ದ ಸ್ವಾತಿ ರೆಡ್ಡಿ ತಾವು ಯಾರನ್ನೂ ಲವ್ ಮಾಡಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅಲ್ಲದೇ, ತಮ್ಮ ತಾಯಿಯೇ ಹಣಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇದೇ ವಿಷಯಕ್ಕೆ ಠಾಣೆಯಲ್ಲೇ ಅಮ್ಮನಿಗೂ ಮಗಳಿಗೂ ಜಟಾಪಟಿ ನಡೆದು ಕೈಕೈ ಮಿಲಾವಣೆ ಹಂತಕ್ಕೂ ಹೋಗಿತ್ತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ‘ಲವ್ ಫೇಮ್’ ಎಂಬ ಚಿತ್ರದಲ್ಲಿ ಸ್ವಾತಿ ರೆಡ್ಡಿ ನಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...