alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವ ಕಳ್ಳಸಾಗಣೆ ಗ್ಯಾಂಗ್ ಬಣ್ಣ ಬಯಲು ಮಾಡಿದ ನಟಿ

ನಟಿ ಕಂಗನಾ ಅಭಿನಯದ ರಿವಾಲ್ವಾರ್ ರಾಣಿ ಚಿತ್ರದಲ್ಲಿ ನಟಿಸಿರುವ ಪ್ರೀತಿ ಸೂದ್ ಒಂದೊಳ್ಳೆ ಕೆಲಸ ಮಾಡಿ ಎರಡು ಮುಗ್ದ ಮಕ್ಕಳ ಜೀವ ಉಳಿಸಿದ್ದಾಳೆ. ಪ್ರೀತಿ ಮುಂಬೈನಲ್ಲಿ ನಡೆಯುತ್ತಿದ್ದ ಮಕ್ಕಳ ಕಳ್ಳಸಾಗಣೆ ಬಗ್ಗೆ ಧೈರ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾಳೆ.

ಪ್ರೀತಿ ಸೂದ್ ಗೆ ನೆರವಾದ ಪೊಲೀಸರು 4 ಮಂದಿ ಏಜೆಂಟರ್ ಗಳನ್ನು ಬಂಧಿಸಿದ್ದಾರೆ. ಇಬ್ಬರು ಮಕ್ಕಳನ್ನು ಏಜೆಂಟರ್ ಗಳು ಅಮೆರಿಕಾಕ್ಕೆ ರವಾನೆ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತ ಏಜೆಂಟರ್ ಗಳಲ್ಲಿ ಒಬ್ಬ ನಿವೃತ್ತ ಸಬ್ ಇನ್ಸ್ಪೆಕ್ಟರ್ ಮಗ ಎನ್ನಲಾಗಿದೆ. ರಕ್ಷಿಸಲ್ಪಟ್ಟ ಇಬ್ಬರು ಬಾಲಕಿಯರ ವಯಸ್ಸು 11 ಮತ್ತು 17 ವರ್ಷವೆಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯರ ಪಾಲಕರು ಏಜೆಂಟರ್ ಗಳಿಗೆ ಮಕ್ಕಳನ್ನು ಮಾರಾಟ ಮಾಡಿದ್ದರು. ಪ್ರತಿ ಏಜೆಂಟರ್ ಗಳು ಒಂದೊಂದು ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಮಾರ್ಚ್ ನಾಲ್ಕರಂದು ಘಟನೆ ನಡೆದಿದೆ. ಪ್ರೀತಿ ವೆರ್ಸೋವಾಕ್ಕೆ ಹೋಗಿದ್ದಳಂತೆ. ಅಲ್ಲಿನ ಬ್ಯೂಟಿ ಪಾರ್ಲರ್ ಒಂದರಲ್ಲಿ ಹುಡುಗಿಯರಿಗೆ ಮೇಕಪ್ ಮಾಡುವಂತೆ ಏಜೆಂಟರ್ ಗಳು ಆದೇಶ ಮಾಡುತ್ತಿದ್ದರಂತೆ. ಈ ಬಗ್ಗೆ ಪ್ರೀತಿ ವಿಚಾರಿಸಿದ್ದಾಳೆ. ಮಕ್ಕಳ ಪಾಲಕರು ಅಮೆರಿಕಾದಲ್ಲಿದ್ದು, ಅಲ್ಲಿಗೆ ಕಳುಹಿಸಬೇಕೆಂದು ಏಜೆಂಟರ್ ಗಳು ಹೇಳಿದ್ದಾರೆ.

ಅನುಮಾನ ಬಂದ ಪ್ರೀತಿ ಮಕ್ಕಳನ್ನು ಕೇಳಿದ್ದಾಳೆ. ಆಗ ಮಕ್ಕಳು ಗುಜರಾತಿನವರು ಎಂಬುದು ಗೊತ್ತಾಗಿದೆ. ಪ್ರೀತಿ ಹೇಗೋ ಪೊಲೀಸರಿಗೆ ಕರೆ ಮಾಡಿದ್ದಾಳೆ. ಆದ್ರೆ ಮಕ್ಕಳನ್ನು ಕರೆದುಕೊಂಡು ಒಬ್ಬ ಏಜೆಂಟ್ ಓಡಿದ್ದಾನೆ. ಡಿಸಿಪಿಗೆ ವಿಷ್ಯ ಗೊತ್ತಾಗಿದ್ದು, ನಾಲ್ವರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...