alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟೇಲ್ ರೂಮಿನಲ್ಲಿ ಸಿಕ್ತು ಖ್ಯಾತ ನಟಿಯ ಮೃತದೇಹ

ಬಂಗಾಳಿ ಚಿತ್ರೋದ್ಯಮದ ಪ್ರಸಿದ್ಧ ನಟಿ ಪಾಯಲ್ ಚಕ್ರವರ್ತಿ ಇನ್ನಿಲ್ಲ. ಪಾಯಲ್ ಮೃತದೇಹ ಹೊಟೇಲ್ ರೂಮಿನಲ್ಲಿ ಬುಧವಾರ ಬೆಳಿಗ್ಗೆ ಸಿಕ್ಕಿದೆಯಂತೆ. ಆರಂಭಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯೆಂದು ಪೊಲೀಸರು ಹೇಳಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಸಿಲಿಗುರಿ ಚರ್ಚ್ ರಸ್ತೆಯಲ್ಲಿರುವ ಹೊಟೇಲ್ ಗೆ ಮಂಗಳವಾರ ಸಂಜೆ ಪಾಯಲ್ ಬಂದಿದ್ದರು. ಗುರುವಾರ ಆಕೆ ಹೊಟೇಲ್ ರೂಂ ಖಾಲಿ ಮಾಡಬೇಕಿತ್ತಂತೆ. ಬೆಳಿಗ್ಗೆ ಪಾಯಲ್ ಹೊರಗೆ ಬಂದಿರಲಿಲ್ಲ. ಹೊಟೇಲ್ ಸಿಬ್ಬಂದಿ ಬಾಗಿಲು ತಟ್ಟಿದ್ರೂ ಪ್ರತಿಕ್ರಿಯೆ ಬಂದಿರಲಿಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಬಾಗಿಲು ಒಡೆದಾಗ ಪಾಯಲ್ ಮೃತದೇಹ ಸಿಕ್ಕಿದೆ. ಪಾಯಲ್ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಸತ್ಯ ಬಹಿರಂಗವಾಗಲಿದೆ. ಪಾಯಲ್ ಅನೇಕ ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದಾರೆ. ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಚಿತ್ರದಲ್ಲೂ ನಟಿಸಿದ್ದ ಪಾಯಲ್, ಕೇಲೋ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವವರಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...