alex Certify
ಕನ್ನಡ ದುನಿಯಾ       Mobile App
       

Kannada Duniya

ನಟನ ಮೊಬೈಲ್ ನಲ್ಲಿ ಸೆರೆಯಾಗಿದೆ ದೆವ್ವ..!

Soori

ದೆವ್ವ- ಭೂತಗಳ ಅಸ್ತಿತ್ವದ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ದೆವ್ವ- ಭೂತಗಳು ಇವೆ ಎಂದು ನಿರೂಪಿಸಲು ಕೆಲವರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಂತದೊಂದು ವಿಡಿಯೋ ಈಗ ವೈರಲ್ ಆಗಿದೆ.

ಕಾಲಿವುಡ್ ನಟ ಸೂರಿ, ಚಾಲಕನೊಂದಿಗೆ ಕಾರಿನಲ್ಲಿ ಕೊಯಮತ್ತೂರು- ಪಳನಿ ಹೈವೇನಲ್ಲಿ ಸಾಗುತ್ತಿದ್ದ ವೇಳೆ ಬೆಳಗಿನ ಜಾವ 2-15 ರ ಸುಮಾರಿಗೆ ಮೊಬೈಲ್ ನಲ್ಲಿ ಸೆರೆಯಾದ ದೃಶ್ಯವೊಂದನ್ನು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿದ್ದು, ಈ ವಿಡಿಯೋ ಕುರಿತು ಈಗ ಪರ- ವಿರೋಧದ ಅಭಿಪ್ರಾಯಗಳು ಕೇಳಿ ಬಂದಿವೆ.

ಕಾರು ಹೋಗುತ್ತಿದ್ದ ವೇಳೆ ನಟ್ಟ ನಡುರಸ್ತೆಯಲ್ಲಿ ಆಕೃತಿಯೊಂದು ಕಾಣಿಸಿಕೊಂಡಿದ್ದು, ಇದನ್ನು ನೋಡುತ್ತಲೇ ಗಾಬರಿಗೊಳಗಾದ ಸೂರಿ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಸೂಚಿಸುತ್ತಾರೆ. ಆದರೂ ಅಕೃತಿ ಕದಲದೆ ಇದ್ದಾಗ ಹೆಡ್ ಲೈಟ್ ಆಫ್ ಮಾಡಲು ಸೂಚಿಸುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಹೆಡ್ ಲೈಟ್ ಆನ್ ಮಾಡಿದ ವೇಳೆ ಗಾಬರಿಗೊಳಗಾಗುವಂತಹ ದೃಶ್ಯ ಕಂಡು ಬಂದಿದೆ. ಆ ಅಕೃತಿ ಅವರ ಕಾರಿನ ಗ್ಲಾಸ್ ಮೇಲೇ ಬಂದು ಕೂತಿರುತ್ತದೆ. ಈ ಸಂದರ್ಭದಲ್ಲಿ ಸೂರಿ ಹಾಗೂ ಅವರ ಕಾರು ಚಾಲಕನ ಆತಂಕದ ಸಂಭಾಷಣೆ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ.

ಈ ವಿಡಿಯೋ ನೋಡಿದ ಕೆಲವರು, ಯಾವುದೋ ಲಾರಿಗೆ ಕಟ್ಟಿದ್ದ ಟಾರ್ಪಲ್ ಗಾಳಿಗೆ ಹಾರಿ ಬಂದಿದ್ದು, ಇದನ್ನೇ ಸೂರಿ ದೆವ್ವವೆಂದು ಭಾವಿಸಿದ್ದಾರೆಂದು ಅಭಿಪ್ರಾಯಪಟ್ಟಿದ್ದರೆ ಮತ್ತೆ ಕೆಲವರು ಇದು ನಿಜವಾದ ದೆವ್ವ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...