alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದಲ್ಲಿ ಸಿಲುಕಿ ಸಹಾಯ ಯಾಚಿಸಿದ ನಟ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಸಲೀಂ ಕುಮಾರ್‌ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಪರವೂರ್‌-ಕೊಡುಂಗಲೂರು ಮಾರ್ಗದಲ್ಲಿರುವ ತಮ್ಮ ಮನೆಗೆ ನೀರು ನುಗ್ಗಿರುವುದಾಗಿ ಸಲೀಂ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಲೀಂ ಗುರುವಾರ ಸಂಜೆ ಮನೆ ಖಾಲಿ ಮಾಡಲು ತಯಾರಿ ನಡೆಸಿದ್ದರು. ಆದರೆ ಹತ್ತಿರ ವಾಸವಿರುವ ಕುಟುಂಬಗಳು ಸಂತ್ರಸ್ತರಾಗಿದ್ದು, ಅವರಿಗೆ ಮನೆಯಲ್ಲಿ ಆಶ್ರಯ ನೀಡಲಾಗಿತ್ತು. ಹೀಗಾಗಿ ನಾನು ಅವರೊಂದಿಗೆ ಉಳಿದಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಪ್ರವಾಹ ನೀರು ಮನೆಯ ಮೊದಲ ಮಹಡಿವರೆಗೆ ತಲುಪಿದ್ದು, ಸಹಾಯಕ್ಕಾಗಿ ಕೋರಿದ್ದಾರೆ.

ಶುಕ್ರವಾರ ಮಧ್ಯಾಹ್ನದ ವೇಳೆ ರಕ್ಷಣಾ ತಂಡ ಸಲೀಂ ಕುಮಾರ್‌ ಹಾಗೂ ಮನೆಯಲ್ಲಿದ್ದವರನ್ನು ರಕ್ಷಿಸಿದೆ. ಪೃಥ್ವಿರಾಜ್‌, ಮಲ್ಲಿಕಾ ಸುಕುಮಾರನ್‌, ಜೋಜು ಜಾರ್ಜ್‌ ಸೇರಿ ಅನೇಕ ಚಿತ್ರ ನಟರು ಕೇರಳದ ಪ್ರವಾಹದಲ್ಲಿ ಸಿಲುಕಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...