alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನ ಪತ್ನಿಯನ್ನೇ ಪ್ರೀತಿಸಿದ್ದಕ್ಕೆ ಘೋರ ಶಿಕ್ಷೆ…!

ಮಾಲೀಕನ ಪತ್ನಿಯ ಜೊತೆಗೆ ಓಡಿ ಹೋಗಿದ್ದ ಅನ್ನೋ ಆರೋಪದ ಮೇಲೆ ಬಿಹಾರದಲ್ಲಿ ವ್ಯಕ್ತಿಯೊಬ್ಬನ ಕಣ್ಣಿಗೆ ಆ್ಯಸಿಡ್ ಇಂಜೆಕ್ಟ್ ಮಾಡಲಾಗಿದೆ. ಪರಿಣಾಮ ಆತ ಕಣ್ಣುಗಳನ್ನೇ ಕಳೆದುಕೊಂಡಿದ್ದಾನೆ. ಪಿಪ್ರಾ ಚೌಕದ ಬಳಿ ರಾತ್ರಿ ನಡೆದ ಘಟನೆ ಇದು.

ಬರೌನಿ ಗ್ರಾಮದಲ್ಲಿ ಟ್ರಾಕ್ಟರ್ ಚಾಲಕನಾಗಿ ಆತ ಕೆಲಸ ಮಾಡ್ತಿದ್ದ. 30 ವರ್ಷದ ಯುವಕ ತನ್ನ ಮಾಲೀಕನ ಪತ್ನಿಯ ಜೊತೆಗೆ ಅಫೇರ್ ಇಟ್ಟುಕೊಂಡಿದ್ದ. ಫೆಬ್ರವರಿ 6ರಂದು ಇಬ್ಬರೂ ಓಡಿ ಹೋಗಿದ್ದರು. ಆದ್ರೆ ತನ್ನ ಪತ್ನಿಯನ್ನು ಚಾಲಕ ಅಪಹರಿಸಿದ್ದಾನೆ ಅಂತಾ ಮಾಲೀಕ ದೂರು ನೀಡಿದ್ದ.

ಫೆಬ್ರವರಿ 16ರಂದು ಆಕೆಯ ಹೇಳಿಕೆ ಪಡೆದ ಕೋರ್ಟ್ ಪತಿಯ ಜೊತೆಗೆ ಕಳಿಸಿಕೊಟ್ಟಿದೆಯಂತೆ. ಆಕೆ ಕೋರ್ಟ್ ನಲ್ಲಿ ಏನು ಹೇಳಿದ್ದಾಳೆ ಅನ್ನೋದು ಇವನಿಗೆ ಗೊತ್ತಿರಲಿಲ್ಲ. ನಿನ್ನೆ ಚಾಲಕನಿಗೆ ಕರೆ ಮಾಡಿದ ಮಹಿಳೆಯ ಸಂಬಂಧಿ, ಆಕೆ ನಿನ್ನೊಂದಿಗೇ ಇರಲು ಬಯಸುತ್ತಿದ್ದಾಳೆ, ಪೊಲೀಸ್ ಠಾಣೆಗೆ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದ್ದ.

ಪೊಲೀಸ್ ಠಾಣೆಯಿಂದ 1 ಕಿಮೀ ದೂರದಲ್ಲೇ ಚಾಲಕನನ್ನು ಅಡ್ಡಗಟ್ಟಿದ 20 ಜನರ ಗುಂಪು ತೀವ್ರವಾಗಿ ಹಲ್ಲೆ ಮಾಡಿದೆ. ನಂತರ ಆತನ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ದಾರೆ. ನಂತರ ಅವನನ್ನು ಹನುಮಾನ್ ಚೌಕದ ಬಳಿ ಬಿಸಾಡಿ ಹೋಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...