alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರ್ಖಂಡ್ ನಲ್ಲಿ ಮಹಿಳೆಯೊಂದಿಗೆ ಆಮಾನವೀಯ ವರ್ತನೆ

ಮಹಿಳೆಯೊಬ್ಬಳು ಮೊಬೈಲ್ ಕದ್ದಿದ್ದಾಳೆಂಬ ಶಂಕೆ ಮೇಲೆ ಜನರ ಗುಂಪೊಂದು ಆಕೆಯೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್ ನ ಪಶ್ಚಿಮ ಸಿಂಘ್ಭೂಮ್ ನಲ್ಲಿ ಗುರುವಾರದಂದು ಈ ಘಟನೆ ನಡೆದಿದ್ದು, ಮಹಿಳೆಯನ್ನು ಸುತ್ತುವರೆದ ಗುಂಪು, ಆಕೆಯ ಮೇಲೆ ಹಲ್ಲೆ ನಡೆಸಿದೆಯಲ್ಲದೇ ತಲೆ ಕೂದಲನ್ನು ಕತ್ತರಿಸಿದೆ. ಬಳಿಕ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ.

ಇದನ್ನು ಗಮನಿಸಿದ ಕೆಲವರು ಮಧ್ಯ ಪ್ರವೇಶಿಸಿ, ಮಹಿಳೆಯನ್ನು ಗುಂಪಿನ ಕಿರುಕುಳದಿಂದ ಪಾರು ಮಾಡಿದ್ದಾರೆ. ಘಟನೆಯ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ವಿಚಾರ ಪೊಲೀಸರಿಗೆ ಮುಟ್ಟುತ್ತಿದ್ದಂತೆಯೇ ಮಹಿಳೆಯನ್ನು ಪತ್ತೆ ಹಚ್ಚಿ ಆಕೆಯಿಂದ ದೂರು ಪಡೆದು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...