alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್ಕೌಂಟರ್ ಭಯಕ್ಕೆ ಕ್ರಿಮಿನಲ್ಸ್ ಮಾಡ್ತಿದ್ದಾರೆ ಇಂಥ ಕೆಲಸ

ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಕ್ಕೆ ಕಡಿವಾಣ ಹಾಕಲು ಪೊಲೀಸರು ಎನ್ಕೌಂಟರ್ ಶುರು ಮಾಡಿದ್ದಾರೆ. ಎನ್ಕೌಂಟರ್ ಭಯಕ್ಕೆ ಆರೋಪಿಗಳು ಪೊಲೀಸರಿಗೆ ಶರಣಾಗ್ತಿದ್ದಾರೆ. ಸೋಮವಾರ ಕೊಲೆ ಆರೋಪಿಯೊಬ್ಬ ಶಾಮ್ಲಿ ಪೊಲೀಸ್ ಠಾಣೆಗೆ ಬಂದು ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ.

ವರದಿ ಪ್ರಕಾರ, ಆರೋಪಿ ಕೆಲ ದಿನಗಳ ಹಿಂದೆ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನಂತೆ. ಈಗ ನಿಮ್ಮ ಮುಂದೆ ಶರಣಾಗ್ತಿದ್ದೇನೆ. ನನ್ನನ್ನು ಬಂಧಿಸಿ. ನನಗೆ ಎನ್ಕೌಂಟರ್ ಭಯ ಶುರುವಾಗಿದೆ. ಇನ್ಮುಂದೆ ಹೀಗೆ ಮಾಡಲ್ಲ ಎಂದಿದ್ದಾನೆ ವ್ಯಕ್ತಿ.

ಗುರುವಾರ ಕೂಡ ಇಬ್ಬರು ಕ್ರಿಮಿನಲ್ಸ್ ಎಲ್ಲರ ಗಮನ ಸೆಳೆದಿದ್ದರು. ಕೊರಳಿಗೆ ಪ್ಲೇಟ್ ಹಾಕಿಕೊಂಡು ತಿರುಗುತ್ತಿರುವುದು ಕಂಡು ಬಂತು. ಇನ್ಮುಂದೆ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗುವುದಿಲ್ಲ. ಕಷ್ಟಪಟ್ಟು ದುಡಿಯುತ್ತೇನೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಬೋರ್ಡ್ ಹಾಕಿಕೊಂಡಿದ್ದರು ಇಬ್ಬರು ಕ್ರಿಮಿನಲ್ಸ್.

ಕಳೆದ ಕೆಲ ತಿಂಗಳಿಂದ ಎಸ್ಪಿ ಅಜಯ್ ಪಾಲ್ 6ಕ್ಕೂ ಹೆಚ್ಚು ಎನ್ಕೌಂಟರ್ ಮಾಡಿದ್ದಾರೆ. ಅನೇಕ ಕ್ರಿಮಿನಲ್ಸ್ ಗಾಯಗೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...