alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿರುವ ಕೈದಿಗೆ ಲಭಿಸುತ್ತಿದೆ ಮನೆಯೂಟ, ಕಾರಣವೇನು ಗೊತ್ತಾ…?

ಮುಂಬೈ: ಜೈಲು ವಾಸದಲ್ಲಿ ಮನೆಯೂಟವೇ? ಎಲ್ಲೋ ವಿಐಪಿಗಳಿಗೆ ಸಿಗುವ ಭಾಗ್ಯವಿದು ಎಂದು ನೀವಂದುಕೊಂಡರೆ ತಪ್ಪು. ಅನಿವಾರ್ಯ ಸಂದರ್ಭದಲ್ಲಿ ಜನ ಸಾಮಾನ್ಯರಿಗೂ ಲಭ್ಯ.

ಇದೀಗ ಮುಂಬೈನ ಅರ್ಥರ್ ಜೈಲಿನಲ್ಲಿನ ಕೈದಿಯೊಬ್ಬನಿಗೆ ಮನೆಯಿಂದಲೇ ಊಟ ಒದಗಿಸಲು ಅನುವು ಮಾಡಿಕೊಡಬೇಕು ಎಂದು ನ್ಯಾಯಾಧೀಶರು ಆದೇಶಿಸಿರುವುದು ಜೈಲಾಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.

ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರ(ಮೂರ್ಛೆರೋಗ)ದಿಂದ ಬಳಲುತ್ತಿರುವ ಸಾಜಿದ್ ಎಲೆಕ್ಟ್ರಿಕ್ ವಾಲಾ ಎಂಬ ಕೈದಿಯೊಬ್ಬ ಜೈಲಿನ ಊಟ ತನಗೆ ನೀಡುತ್ತಿರುವ ಚಿಕಿತ್ಸೆಗೆ ಒಗ್ಗಿಕೊಳ್ಳುವುದಿಲ್ಲವಾದದ್ದರಿಂದ ಮನೆಯಿಂದ ಊಟ ತರಲು ಅವಕಾಶ ನೀಡುವಂತೆ ವಿನಂತಿಸಿದ್ದ.

ಹಾಗೆ ಮಾಡಿದರೆ ಉಳಿದವರಿಗೂ ಅವಕಾಶ ಮಾಡಿಕೊಡಬೇಕಾಗುತ್ತದೆಂಬ ಕಾರಣಕ್ಕೆ ಜೈಲಾಧಿಕಾರಿಗಳು ಇದಕ್ಕೆ ಒಪ್ಪಿರಲಿಲ್ಲ. ಈ ಸಂದರ್ಭದಲ್ಲಿ ಕೈದಿ ಕೋರ್ಟ್ ಮೊರೆ ಹೋಗಿದ್ದು ಸ್ವತಃ ನ್ಯಾಯಾಧೀಶರೇ ಜೈಲಿಗೆ ಆಗಮಿಸಿ ಅಲ್ಲಿ ನೀಡುತ್ತಿರುವ ಚಪಾತಿಯನ್ನು ಪರೀಕ್ಷಿಸಿದ್ದಾರೆ. ವೈದ್ಯರು ಸೂಚಿಸಿರುವ ಆಹಾರ ಪದ್ಧತಿಗೂ ಜೈಲಿನಲ್ಲಿ ನೀಡುತ್ತಿರುವ ಆಹಾರಕ್ಕೂ ಅಗಾಧ ವ್ಯತ್ಯಾಸವನ್ನು ಮನಗಂಡರು.

ಹಾಗಾಗಿ ಕೈದಿಗೆ ಆತನ ಮನೆಯಿಂದಲೇ ತಯಾರಿಸಿ ತಂದ ಆಹಾರ ಸೇವಿಸಲು ಅವಕಾಶ ಮಾಡಿಕೊಡಲು ಆದೇಶಿಸಿದ್ದಾರೆ. ಹಾಗಂತ ಇದೇನು ಶಾಶ್ವತ ಅಲ್ಲ. ಆರು ತಿಂಗಳ ಬಳಿಕ ಆತನ ಮೆಡಿಕಲ್ ರಿಪೋರ್ಟ್ ಪರಿಶೀಲಿಸಿ ನಂತರ ಮನೆಯೂಟ ಮುಂದುವರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...