alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಕರ ಅಪಘಾತದಲ್ಲಿ ಮಧುಮಗ ಸೇರಿ ನಾಲ್ವರ ಸಾವು

telangana-aa

ಹೈದರಾಬಾದ್:  ಮದುವೆ ದಿಬ್ಬಣದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು, ಮಧುಮಗ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸೂರ್ಯಪೇಟ್ ಜಿಲ್ಲೆಯ ಮೋತಾ ಗ್ರಾಮದ ಬಳಿ ಸಾಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ದಿಬ್ಬಣದ ಲಾರಿಗೆ ಡಿಕ್ಕಿ ಹೊಡೆದಿದೆ.

ಮಧುಮಗ ಶೇಷ ಸಾಯಿನಾಥ್ ಸೇರಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಹೈದರಾಬಾದ್ ನ ಕೂಕಟತಳ್ಳಿ ನಿವಾಸಿಗಳಾಗಿದ್ದು, ಖಮ್ಮಂ ಜಿಲ್ಲೆಯ ಚೆರ್ಲಾಗೆ ಮದುವೆಗೆ ಹೊರಟಿದ್ದರು.

ಸ್ಥಳಕ್ಕೆ ಸೂರ್ಯಪೇಟ್ ಡಿ.ವೈ.ಎಸ್.ಪಿ. ಸುನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸೂರ್ಯಪೇಟ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಮದುವೆ ನಡೆಯಬೇಕಿದ್ದು, ಬೆಳಗಿನಜಾವ ಅಪಘಾತ ಸಂಭವಿಸಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...