alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳು ‘ಬಿಗ್ ಬಾಸ್’ ಮನೆಯಲ್ಲಿ ನಡೆದಿದೆ ದುರಂತ

ಸ್ಟಾರ್ ನಟ ಕಮಲ್ ಹಾಸನ್ ನಿರೂಪಣೆಯ, ತಮಿಳು ಬಿಗ್ ಬಾಸ್ ಮನೆಯಲ್ಲಿ ಅವಘಡ ನಡೆದಿದೆ. ಬಿಗ್ ಬಾಸ್ ಮನೆಯ ಎರಡನೇ ಮಹಡಿಯಲ್ಲಿ ಕೆಲಸ ಮಾಡುವ ವೇಳೆ ಕಾಲು ಜಾರಿ ಬಿದ್ದ ಪರಿಣಾಮ, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಗುಣಶೇಖರನ್ ಎಂದು ಗುರುತಿಸಲಾಗಿದೆ. ಚೆನ್ನೈ ಸಮೀಪದ ಪೂನಮ್ ನ ಇ.ವಿ.ಪಿ. ಫಿಲ್ಮ್ ಸಿಟಿಯಲ್ಲಿ ಘಟನೆ ನಡೆದಿದೆ.

ಗುಣಶೇಖರನ್ ಫಿಲ್ಮ್ ಸಿಟಿಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಎ.ಸಿ. ದುರಸ್ತಿ ಮಾಡುವ ವೇಳೆ, ಕಾಲು ಜಾರಿ ಬಿದ್ದ ಘಟನೆ ರಾತ್ರಿಯ ವೇಳೆ ಸಂಭವಿಸಿದ್ದು, ಸಹ ಸಿಬ್ಬಂದಿಗಳು ಗುಣಶೇಖರನ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ, ಗುಣಶೇಖರನ್ ಸಾವನ್ನಪ್ಪಿದ್ದಾರೆ ಎಂದು ವ್ಯೆದ್ಯರು ಸ್ಪಷ್ಟಪಡಿಸಿದ್ದಾರೆ.

ನಜರತ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕಮಲ್ ಹಾಸನ್ ನಡೆಸಿಕೊಡುವ ಬಿಗ್ ಬಾಸ್ ಮೊದಲ ಆವೃತ್ತಿ ಮುಂಬೈನಲ್ಲಿ ಶೂಟಿಂಗ್ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...