alex Certify
ಕನ್ನಡ ದುನಿಯಾ       Mobile App
       

Kannada Duniya

2 ಲಾರಿಗಳ ನಡುವೆ ಟವೆರಾ ವಾಹನ ಸಿಲುಕಿ 8 ಸಾವು

accident nm

ಹೈದರಾಬಾದ್: 2 ಬೃಹತ್ ಲಾರಿಗಳ ನಡುವೆ ಟವೆರಾ ವಾಹನ ಸಿಲುಕಿ, 8 ಮಂದಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಸುತಾರಿ ಗುಡ ಟೋಲ್ ಗೇಟ್ ಬಳಿ ಈ ಭೀಕರ ದುರಂತ ಸಂಭವಿಸಿದೆ.

ಟೋಲ್ ಗೇಟ್ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟವೆರಾ ವಾಹನ ನಿಂತಿದೆ. ಇದೇ ವೇಳೆ ಟವೆರಾ ವಾಹನಕ್ಕೆ ವೇಗವಾಗಿ ಬಂದ ಬೃಹತ್ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಟವೆರಾದಲ್ಲಿ 8 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮಹಮ್ಮದ್ ಅಖಿಲ್, ಇಮ್ರಾನ್, ಫೈರೋಜ್, ಇರ್ಫಾನ್, ನಿಶಾದ್ ಸೇರಿದಂತೆ 8 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಓರ್ವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

2 ಲಾರಿಗಳ ನಡುವೆ ಸಿಲುಕಿದ ಟವೆರಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತರು ಟವೆರಾದಲ್ಲಿ ಸದಾಶಿವಪೇಟ್ ನಿಂದ ಕೊಂಪಲ್ಲಿಗೆ ತೆರಳುತ್ತಿದ್ದು, ರಂಗಾರೆಡ್ಡಿ ಜಿಲ್ಲೆಯ ಸುತಾರಿಗಡ ಟೋಲ್ ಗೇಟ್ ಬಳಿ ಬಂದಾಗ ದುರಂತ ಸಂಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...