alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ್ಲೇ ಅಚ್ಛೇ ದಿನ್’

rahul_gandhi_congress_convention_650_636197322448435186

ಹೊಸ ವರ್ಷದ ರಜೆ ಮುಗಿಸಿ ವಿದೇಶದಿಂದ ನಿನ್ನೆಯಷ್ಟೆ ಮರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ನೋಟು ನಿಷೇಧದ ವಿರುದ್ಧ ಮಾತನಾಡಿದ ರಾಹುಲ್, ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದ ಮೇಲಷ್ಟೆ ಎಲ್ಲರಿಗೂ ಅಚ್ಛೇ ದಿನ್ ಎಂದ್ರು.

‘ಅಚ್ಛೇ ದಿನ್ ಯಾವಾಗ ಬರುತ್ತೆ ಅಂತಾ ಜನರು ಕೇಳ್ತಾನೇ ಇದ್ದಾರೆ, 2019ರಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದ ಮೇಲೆ ಅಚ್ಛೇದಿನ್ ಬರಲಿದೆ’ ಅಂತಾ ಹೇಳಿದ್ರು. ನೋಟು ನಿಷೇಧ ಭಾರತೀಯ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ಧಾರ ಅಂತಾ ಅಭಿಪ್ರಾಯಪಟ್ರು. ನಾವು 60 ವರ್ಷಗಳಲ್ಲಿ ಮಾಡಲು ಸಾಧ್ಯವಾಗದೇ ಇದ್ದಿದ್ದನ್ನು ಮೋದಿ 2 ವರ್ಷಗಳಲ್ಲಿ ಮಾಡಿದ್ದಾರೆ, ಆರ್ ಬಿ ಐ ನಂತಹ ಸಂಸ್ಥೆಗಳನ್ನು ಹಾಳುಮಾಡಿದ್ದಾರೆ ಅಂತಾ ಆರೋಪಿಸಿದ್ರು.

ಯಾರು ಹಿಂದೂ ಧರ್ಮದ ಬಗ್ಗೆ ಮಾತನಾಡ್ತಿದ್ದಾರೋ ಅವರು ದೇಶದ ಪ್ರತಿ ಆತ್ಮವನ್ನೂ ನಾಶ ಮಾಡುತ್ತಿದ್ದಾರೆ ಅಂತಾ ಪರೋಕ್ಷ ಟಾಂಗ್ ಕೊಟ್ರು. ದೆಹಲಿಯಲ್ಲಿ ಇವತ್ತು ಕಾಂಗ್ರೆಸ್ ಸಭೆ ನಡೆಯುತ್ತಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಂಡಿಲ್ಲ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...