alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿಯವರಿಗೆ ರವಾನೆಯಾಗ್ತಿದೆ 10 ಲಕ್ಷ ಜನರ ಸಹಿಯುಳ್ಳ ಪತ್ರ- ಕಾರಣವೇನು ಗೊತ್ತಾ…?

ಕೇಂದ್ರಾಡಳಿತ ಪ್ರದೇಶವಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯನ್ನು ಪೂರ್ಣ ರಾಜ್ಯವನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪ್ರಧಾನಿ ಮೋದಿಯವರಿಗೆ 10 ಲಕ್ಷ ಜನರ ಸಹಿಯುಳ್ಳ ಪತ್ರಗಳನ್ನು ರವಾನಿಸಲಾಗ್ತಿದೆ.

ಆಮ್‌ ಆದ್ಮಿ ಪಾರ್ಟಿಯ ಶಾಸಕ ಗೋಪಾಲ ರಾಯ್ ಈ ಪತ್ರಗಳನ್ನು ಪ್ರಧಾನಿ ಕಛೇರಿಗೆ ತಲುಪಿಸಲಿದ್ದಾರೆ. ಜುಲೈನಲ್ಲಿ ಈ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಷ್ಟ್ರ ರಾಜಧಾನಿಯಾಗಿ ದೆಹಲಿಗೆ ಸಂಪೂರ್ಣ ರಾಜ್ಯತ್ವ ನೀಡಬೇಕು ಎಂದು ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಸ್ವಂತ ರಾಜ್ಯದಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆಯನ್ನು ದೆಹಲಿ ಜನ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜು.1 ರಿಂದ ಸಹಿ ಸಂಗ್ರಹಣಾ ಕಾರ್ಯಕ್ರಮ ನಡೆಸಲಾಗಿತ್ತು. ಸುಮಾರು 10 ಲಕ್ಷ ಸಹಿಗಳ ಪತ್ರ ಇದೀಗ ಪ್ರಧಾನಿ ಮೋದಿಯವರಿಗೆ ರವಾನಿಸಲಾಗುತ್ತದೆ ಎಂದು ಗೋಪಾಲ್‌ ರಾಯ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...