alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ರಹಸ್ಯ ಬಹಿರಂಗಪಡಿಸಿದ ಕಪಿಲ್ ಮಿಶ್ರಾ

kapil-pm-s

ನವದೆಹಲಿ: ನನ್ನ ಎದುರಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ ಕಪಿಲ್ ಮಿಶ್ರಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ದೆಹಲಿ ಸಚಿವ ಸ್ಥಾನದಿಂದ ವಜಾಗೊಂಡಿರುವ ಕಪಿಲ್ ಮಿಶ್ರಾ ಉಪ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಸಚಿವ ಸತ್ಯೇಂದ್ರ ಜೈನ್ ಅವರಿಂದ ಕೇಜ್ರಿವಾಲ್ 2 ಕೋಟಿ ರೂ. ಪಡೆದುಕೊಂಡಿದ್ದಾರೆ. ಕೇಜ್ರಿವಾಲ್ ಸಂಬಂಧಿಗಾಗಿ ದೆಹಲಿಯ ಛತರ್ ಪುರ್ ನಲ್ಲಿ 50 ಕೋಟಿ ರೂ. ಮೊತ್ತದ ಲ್ಯಾಂಡ್ ಡೀಲ್ ಮಾಡಲಾಗಿದೆ. ಇದನ್ನು ಸತ್ಯೇಂದ್ರ ಜೈನ್ ತಮ್ಮ ಬಳಿ ಹೇಳಿದ್ದು, ದಾಖಲೆಗಳನ್ನು ತನಿಖಾ ಸಂಸ್ಥೆಗಳಿಗೆ ಕೊಡುತ್ತೇನೆ ಎಂದು ಕಪಿಲ್ ಮಿಶ್ರಾ ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ ಸಿ.ಬಿ.ಐ. ಕಚೇರಿಗೆ ತೆರಳಿ ದೂರು ನೀಡುತ್ತೇನೆ. ಪಂಜಾಬ್ ವಿಧಾನಸಭೆ ಚುನಾವಣೆ ಮತ್ತು ದೆಹಲಿ ಪಾಲಿಕೆ ಚುನಾವಣೆಗಳಲ್ಲಿ ಆಪ್ ನ ಕೆಲವರು ಹಣ ಸಂಗ್ರಹಿಸಿದ್ದರು ಎಂದು ಆರೋಪಿಸಿದ್ದಾರೆ.

ಪಕ್ಷದ 4-5 ಮಂದಿ ಮುಖಂಡರು, ಟಿಕೆಟ್ ಆಕಾಂಕ್ಷಿಗಳಿಂದ ಮತ್ತು ಬೆಂಬಲಿಗರಿಂದ ಹಣ ಸಂಗ್ರಹಣೆ ಮಾಡಿದ್ದಾರೆ ಎಂದು ತಿಳಿಸಿದ ಅವರು, ದೆಹಲಿ ಸರ್ಕಾರದ ಟೆಂಡರ್ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಆಪ್ ವಕ್ತಾರ ಸಂಜಯ್ ಸಿಂಗ್ ಆರೋಪಿಸಿರುವಂತೆ ನಾನು ಬಿ.ಜೆ.ಪಿ. ಏಜೆಂಟ್ ಅಲ್ಲ. ಆ ಪಕ್ಷವನ್ನು ಸೇರಲ್ಲ. ನಾನು ಭ್ರಷ್ಟಾಚಾರ ನಡೆಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪಕ್ಷದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತಿಳಿಸಿದ್ದೇನೆ. ನನ್ನನ್ನು ಪಕ್ಷದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಕೇಜ್ರಿವಾಲ್ ಬೆಂಬಲಿಗರಿಂದ ನನಗೆ ಕೊಲೆ ಬೆದರಿಕೆ ಇದೆ. ಇದಕ್ಕೆಲ್ಲಾ ನಾನು ಹಿಂದೆ ಸರಿಯಲ್ಲ. ಹೋರಾಟ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...