alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಪಕ್ಷಗಳ ದೇಣಿಗೆ ಕುರಿತು ಬಹಿರಂಗವಾಗಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವ ದೇಣಿಗೆ ಕುಂಠಿತಗೊಳ್ಳುತ್ತಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಎರಡು ಪ್ರಾದೇಶಿಕ ಪಕ್ಷಗಳಾಗಿರುವ ಆಪ್ ಹಾಗೂ ಶಿವಸೇನೆ ಪಡೆದಿರುವ ಒಟ್ಟು ದೇಣಿಗೆಗಳಿಗಿಂತ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಬಂದಿರುವ ದೇಣಿಗೆ ಕಡಿಮೆಯಾಗಿದೆ.

ಅದೇ ಕಾರಣಕ್ಕಾಗಿಯೇ ಇತ್ತೀಚೆಗೆ ಕಾಂಗ್ರೆಸ್ ದೇಣಿಗೆ ಸಂಗ್ರಹಕ್ಕೆ ಕ್ರೌಡ್ ಫಂಡಿಂಗ್ ಹಾಗೂ 40 ದಿನಗಳ ಸಾಮೂಹಿಕ ಪ್ರಭಾವ ಬೀರುವ ಕಾರ್ಯಕ್ರಮಗಳತ್ತ ಗಂಭೀರವಾಗಿ ತೊಡಗಿಸಿಕೊಳ್ಳಲು ಚಿಂತನೆ ನಡೆಸಿದೆ.

ಚುನಾವಣೆ ಹಾಗೂ ರಾಜಕೀಯ ಪಕ್ಷಗಳ ಕಾವಲು ಸಂಸ್ಥೆಯಾಗಿರುವ ಎಡಿಆರ್, ಇತ್ತೀಚೆಗಷ್ಟೇ 31 ಪ್ರಾದೇಶಿಕ ಪಕ್ಷಗಳು 2016-17ನೇ ಸಾಲಿನಲ್ಲಿ ಪಡೆದುಕೊಂಡ ದೇಣಿಗೆಗಳ ಕುರಿತ ವರದಿ ಬಿಡುಗಡೆಗೊಳಿಸಿದೆ. ರಾಷ್ಟ್ರೀಯ ಪಕ್ಷಗಳ ದೇಣಿಗೆಯ ವಿವರವನ್ನು ಈ ವರ್ಷದ ಆರಂಭದಲ್ಲಿ ಪ್ರಕಟಿಸಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತ ಬಳಿಕ ಕಾಂಗ್ರೆಸ್ ದೇಣಿಗೆ ಸಂಗ್ರಹಿಸಲು ಕಷ್ಟಪಡುತ್ತಿದೆ. 2004-05ರಿಂದ 2008-09ರ ತನಕ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬಹುತೇಕ ಸಮಪ್ರಮಾಣದಲ್ಲಿ ದೇಣಿಗೆ ಬರುತ್ತಿತ್ತು. ಆದರೆ ಯುಪಿಎ-2 ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ಗೆ ಬರುತ್ತಿದ್ದ ದೇಣಿಗೆಯ ದುಪ್ಪಟ್ಟು ಬಿಜೆಪಿ ಪಡೆಯುತ್ತಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಮೂರು ವರ್ಷಗಳಲ್ಲಿ ಕಾಂಗ್ರೆಸ್‌ಗಿಂತ ಐದು ಪಟ್ಟು ಹೆಚ್ಚು ದೇಣಿಗೆಯನ್ನು ಬಿಜೆಪಿ ಪಡೆದಿದೆ ಎಂದು ಎಡಿಆರ್ ಪ್ರಕಟಿಸಿರುವ ಅಂಕಿಅಂಶಗಳಿಂದ ಬಹಿರಂಗಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...