alex Certify
ಕನ್ನಡ ದುನಿಯಾ       Mobile App
       

Kannada Duniya

ಜಾನುವಾರುಗಳ ಕೊರಳಲ್ಲಿ ನೇತಾಡಲಿದೆ ‘ಆಧಾರ್’

baghdadi-7

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾನುವಾರುಗಳ ರಕ್ಷಣೆಗೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಜಾನುವಾರುಗಳ ಕಳ್ಳ ಸಾಗಣೆ ಹಾಗೂ ಕಸಾಯಿಖಾನೆ ಪದ್ಧತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಯೋಜನೆ ರೂಪಿಸಲು ಮುಂದಾಗಿದೆ. ಜಾನುವಾರುಗಳಿಗೆ ಆಧಾರ್ ಕಾರ್ಡ್ ತರಲು ಸರ್ಕಾರಗಳು ಚಿಂತನೆ ನಡೆಸುತ್ತಿವೆ.

ಉತ್ತರಖಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ರೆ ಹೇಗೆ ಆಧಾರ್ ಕಾರ್ಡ್ ಜಾರಿಗೆ ತರಬೇಕೆನ್ನುವ ಬಗ್ಗೆ ಚಿಂತನೆ ನಡೆಯುತ್ತಿದೆ. ಎಲ್ಲ ಪಶುಗಳಿಗೂ ಆಧಾರ್ ಕಾರ್ಡ್ ಜಾರಿಗೆ ತರುವ ಬಗ್ಗೆಯೂ ಯೋಜನೆ ರೂಪಿಸ್ತಿದೆ. ಮೊದಲು ದನ ಮತ್ತು ಎತ್ತಿಗೆ ಆಧಾರ್ ಕಾರ್ಡ್ ಜಾರಿಗೆ ಬರಲಿದೆ. ಇದ್ರಿಂದ ರಾಜ್ಯದಲ್ಲಿ ಎಷ್ಟು ಜಾನುವಾರುಗಳಿವೆ ಎಂಬ ಬಗ್ಗೆ ದಾಖಲೆ ಸಿಗಲಿದೆ.

ಪ್ರತಿಯೊಂದು ಜಾನುವಾರುಗಳ ಕೊರಳಿನಲ್ಲಿ ಈ ಕಾರ್ಡ್ ಇರಲಿದೆ. 12 ಸಂಖ್ಯೆಯ ಕಾರ್ಡ್ ಜಾನುವಾರುಗಳ ಗುರುತು ಪತ್ತೆಗೆ ನೆರವಾಗಲಿದೆ. ಜುಲೈನ ಎರಡನೇ ವಾರದಲ್ಲಿ ಕಾರ್ಡ್ ಸಿದ್ಧಪಡಿಸುವ ಕೆಲಸ ಶುರುವಾಗಲಿದೆ. ಉತ್ತರಖಂಡದ ನಂತ್ರ ಉತ್ತರ ಪ್ರದೇಶ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂಬ ಮಾಹಿತಿ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...