alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಇದಕ್ಕೂ ಕಡ್ಡಾಯವಾಗಲಿದೆ ಆಧಾರ್ ಕಾರ್ಡ್

card_ek9dwyh

ಎಲ್ಲ ಸೇವೆಗಳಿಗೂ ಈಗ ಆಧಾರ್ ಕಾರ್ಡ್ ಕಡ್ಡಾಯವಾಗ್ತಾ ಇದೆ. ವಿಮಾನ ಪ್ರಯಾಣಕ್ಕೆ ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಾಧ್ಯತೆ ದಟ್ಟವಾಗಿದೆ. ಐಟಿ ದಿಗ್ಗಜ ವಿಪ್ರೋ ಕಂಪನಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಸಿಸ್ಟಂ ಬ್ಲ್ಯೂ ಪ್ರಿಂಟ್ ತಯಾರಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಈ ಸಿಸ್ಟಂ, ಯಾತ್ರಿಗಳ ಆಧಾರ್ ಕಾರ್ಡ್ ಜೊತೆ ಸಂಪರ್ಕ ಹೊಂದಲಿದೆ. ಮೇ ಯೊಳಗೆ ವಿಪ್ರೋ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಇದಾದ ನಂತ್ರ ಯಾತ್ರಿಗಳು ತಮ್ಮ ಹೆಬ್ಬೆರಳಚ್ಚನ್ನು ಇಟ್ಟು ಗುರುತು ನೀಡಬೇಕಾಗುತ್ತದೆ. ಈ ವ್ಯವಸ್ಥೆ ಕೇವಲ ದೇಶಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ಮಾತ್ರ. ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಪಾಸ್ಪೋರ್ಟ್ ಅಗತ್ಯವಿದೆ.

ಚಾಲನ ಪರವಾನಿಗೆ ಹಾಗೂ ಪರವಾನಿಗೆ ನವೀಕರಣಕ್ಕೆ ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಾಧ್ಯತೆಯೂ ಇದೆ. ನಕಲಿ ಡಿಎಲ್ ತಡೆಗಟ್ಟಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈಗ ವಿಮಾನ ಪ್ರಯಾಣಕ್ಕೆ ಆಧಾರ್ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...