alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಇಲ್ಲದೆ ಸಿಗಲ್ಲ ರೈಲ್ವೆ ಟಿಕೆಟ್

rail_tickets_

ಆಧಾರ್ ಕಾರ್ಡ್ ಇಲ್ಲದವರು ತಕ್ಷಣ ಎಚ್ಚೆತ್ತುಕೊಳ್ಳಿ. ಮುಂದಿನ ಬಾರಿ ರೈಲ್ವೆ ಟಿಕೆಟ್ ಮಾಡಿಸಲು ಹೋದಾಗ ಆಧಾರ್ ಕಾರ್ಡ್ ಕೇಳುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ವೆಂದಾದ್ರೆ ಟಿಕೆಟ್ ಬುಕ್ ಆಗುವುದು ಕಷ್ಟ. ರೈಲ್ವೆ ಇಲಾಖೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರೈಲ್ವೆ ಟಿಕೆಟ್ ನಲ್ಲಾಗುತ್ತಿರುವ ಅವ್ಯವಹಾರ ತಪ್ಪಿಸುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡನ್ನು ರೈಲ್ವೆ ಟಿಕೆಟ್ ಜೊತೆ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ. ಎರಡು ಹಂತದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಮೊದಲ ಹಂತವಾಗಿ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುವುದು. ನಂತ್ರ ಎಲ್ಲ ರೀತಿಯ ಟಿಕೆಟ್ ಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯ ಮಾಡಲಾಗುವುದು.

ಸಾಮಾನ್ಯವಾಗಿ ಎಲ್ಲರ ಬಳಿಯೂ ಆಧಾರ್ ಕಾರ್ಡ್ ಇರುವುದರಿಂದ ಇದು ಕಷ್ಟವಾಗುವುದಿಲ್ಲ ಎನ್ನುತ್ತಿದೆ ರೈಲ್ವೆ ಇಲಾಖೆ. ಅಧಿಕೃತ ಮೂಲಗಳ ಪ್ರಕಾರ ಭಾರತದಲ್ಲಿ ಸುಮಾರು ಶೇಕಡಾ 96 ಮಂದಿ ಬಳಿ ಆಧಾರ್ ಕಾರ್ಡ್ ಇದೆಯಂತೆ. ಟಿಕೆಟ್ ಮೇಲೆ ಪ್ರಯಾಣಿಕನ ಆಧಾರ್ ಕಾರ್ಡ್ ಸಂಖ್ಯೆ ಮೂಡಲಿದೆ. ಆಧಾರ್ ಕಾರ್ಡ್ ಸಂಖ್ಯೆ ನೀಡಿದ ತಕ್ಷಣ ಟಿಕೆಟ್ ಇನ್ಸ್ಪೆಕ್ಟರ್ ಮೊಬೈಲ್ ಗೆ ವ್ಯಕ್ತಿಯ ಎಲ್ಲ ಮಾಹಿತಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...