alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಜ್ಯದಲ್ಲಿ ಇನ್ಮುಂದೆ ಆಧಾರ್ ಕಡ್ಡಾಯ

ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದ ಎಲ್ಲ ಯೋಜನೆಗಳಿಗೂ ಆಧಾರ್ ಕಡ್ಡಾಯ ಮಾಡಿದೆ. ಯುಪಿ ಸರ್ಕಾರ ಸೋಮವಾರ ಈ ಸಂಬಂಧ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಉತ್ತರ ಪ್ರದೇಶದ ಜನರು ಇನ್ಮುಂದೆ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಾದಲ್ಲಿ ಆಧಾರನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.

ಈ ಮಸೂದೆಗೆ ಉತ್ತರ ಪ್ರದೇಶ ಆಧಾರ್ ಅಧಿನಿಯಮ 2017 ಎಂದು ಹೆಸರಿಡಲಾಗಿದೆ. ಎಲ್ಲ ಫಲಾನುಭವಿಗಳು ಗುರುತಿನ ಪತ್ರದ ರೂಪದಲ್ಲಿ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಸರ್ಕಾರ ಮೂರು ತಿಂಗಳೊಳಗೆ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈವರೆಗೂ ಆಧಾರ್ ಕಾರ್ಡ್ ಹೊಂದಿರದ ಸಾರ್ವಜನಿಕರಿಗೆ ವಿನಾಯಿತಿ ನೀಡಲಾಗುವುದು. ಆಧಾರ್ ಕಾರ್ಡ್ ಬರುವವರೆಗೆ ಸಾರ್ವಜನಿಕರು ಬೇರೆ ಗುರುತಿನ ಪತ್ರವನ್ನು ತೋರಿಸಬಹುದು.

ಮೊದಲ ಹಂತವಾಗಿ ಪಿಂಚಣಿ ಹಾಗೂ ರೈತರ ಸಾಲಮನ್ನಾಕ್ಕೆ ಆಧಾರ್ ಅನಿವಾರ್ಯಗೊಳಿಸಲಾಗಿದೆ. ಆಧಾರ್ ಮೂಲಕ ಜನರ ಪಿಂಚಣಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆ ಸೇರುತ್ತಿದೆ. ಮಾರ್ಚ್ 25, 2018ರೊಳಗೆ ಎಲ್ಲ ಯೋಜನೆಗೂ ಆಧಾರ್ ಕಡ್ಡಾಯ ಮಾಡುವ ಗುರಿಯನ್ನು ಯೋಗಿ ಸರ್ಕಾರ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...