alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ನಿಂದಾಗಿ ಸೇಫಾಗಿ ಮನೆ ಸೇರಿದ್ದಾನೆ ಕಾಣೆಯಾಗಿದ್ದ ವೃದ್ಧ

ಆಧಾರ್ ಕಾರ್ಡ್ ಬೇಕೋ ಬೇಡವೋ ಎಂಬ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಈ ವಿಶಿಷ್ಟ ಗುರುತಿನ ಚೀಟಿಯ ಅಗತ್ಯವನ್ನು ಸಾಬೀತು ಮಾಡುವಂಥ ಘಟನೆಯೊಂದು ರಾಯ್ ಬರೇಲಿಯಲ್ಲಿ ನಡೆದಿದೆ. ಆಧಾರ್ ಕಾರ್ಡ್ ನಿಂದಾಗಿ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದಾನೆ.

ರೈಲಿನಲ್ಲಿ ದರೋಡೆಕೋರರ ಕೈಗೆ ಸಿಕ್ಕಿ ಅತಂತ್ರನಾಗಿದ್ದ ತಮಿಳುನಾಡು ಮೂಲದ ವೃದ್ಧನೊಬ್ಬ ಆಧಾರ್ ಕಾರ್ಡ್ ನಿಂದಾಗಿ ಸೇಫಾಗಿ ತನ್ನ ಮನೆ ಸೇರಿದ್ದಾನೆ. ಮುತ್ತಯ್ಯ ಎಂಬ ಈ ವ್ಯಕ್ತಿ ಭಿಕ್ಷುಕ ಎಂದೇ ಎಲ್ಲರೂ ಭಾವಿಸಿದ್ದರು. ರಾಲ್ಪುರದಲ್ಲಿರುವ ಸ್ವಾಮಿ ಭಾಸ್ಕರ ಸ್ವರೂಪ ಅವರ ಆಶ್ರಮಕ್ಕೆ ತಂದು ಬಿಟ್ಟಿದ್ದರು.

ಅಲ್ಲಿ ವೃದ್ಧನಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿತ್ತು. ಆತನ ಬಳಿಯಿದ್ದ ಆಧಾರ್ ಕಾರ್ಡ್ ನೋಡಿದ ಆಶ್ರಮದವರು ಅವನ ಮೂಲ ನಿವಾಸವನ್ನು ಪತ್ತೆ ಮಾಡಿದ್ದಾರೆ. ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಮುತ್ತಯ್ಯ ಮುಂಬೈನಿಂದ ತಮಿಳುನಾಡಿಗೆ ಹೊರಟಿದ್ದ.

ಈ ವೇಳೆ ದರೋಡೆಕೋರರು ಮತ್ತು ಬರಿಸುವ ಪಾನೀಯ ಕುಡಿಸಿದ್ದರಿಂದ ಮುತ್ತಯ್ಯ ರಾಯ್ ಬರೇಲಿ ತಲುಪಿದ್ದ. ಆತನಿಗೆ ಹಿಂದಿ ಕೂಡ ಬರುತ್ತಿರಲಿಲ್ಲ. ಕೈಯಲ್ಲಿ ನಯಾಪೈಸೆಯೂ ಇರಲಿಲ್ಲ. ಹಾಗಾಗಿ ಭಿಕ್ಷುಕನಂತೆ ಅಲೆಯುತ್ತಿದ್ದ.  ಈಗ ಅವರನ್ನು ಸುರಕ್ಷಿತವಾಗಿ ಮನೆ ತಲುಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...