alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ‘ಆಯುಷ್ಮಾನ್ ಭಾರತ್’ ಗೆ ಆಧಾರ್ ಕಡ್ಡಾಯವಲ್ಲ

ಆಧಾರ್ ಕಾರ್ಡ್ ನ್ನ ಕೇಂದ್ರ ಸರ್ಕಾರ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಕಡ್ಡಾಯಗೊಳಿಸುತ್ತಿದೆ. ಗ್ಯಾಸ್ ಸಿಲಿಂಡರ್, ಪಡಿತರ ವಿತರಣೆ, ಆಮ್ ಆದ್ಮಿ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಆಧಾರ್ ಬಳಕೆ ಕಡ್ಡಾಯವಾಗಿದೆ.

ಆದ್ರೆ ಆಯುಷ್ಮಾನ್ ಭಾರತಕ್ಕೆ ಆಧಾರ್ ಕಡ್ಡಾಯವಲ್ಲ ಅನ್ನೋ ವಿಚಾರವನ್ನ ಈಗ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಷನ್ ಈಗ ಸಾರ್ವಜನಿಕರ ಗಮನಕ್ಕೆ ತಂದಿದೆ. ಆಧಾರ್ ಕಾರ್ಡ್ ಇಲ್ಲ ಅನ್ನೋ ಕಾರಣಕ್ಕೆ ಯಾರು ಕೂಡ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನ ಒದಗಿಸೋದಿಲ್ಲ ಎಂದು ಹೇಳುವಂತಿಲ್ಲ ಅನ್ನೊ ವಿಚಾರವನ್ನ ತಿಳಿಸಿದೆ.

ರಾಷ್ಟ್ರೀಯ ಅರೋಗ್ಯ ಸುರಕ್ಷತಾ ನೀತಿಯ ಅಡಿಯಲ್ಲಿ ಜಾರಿಗೆ ತರಲಾಗಿರುವ ಆಯುಷ್ಮಾನ್ ಭಾರತ್ ಪ್ರತಿ ವ್ಯಕ್ತಿಗೆ ಐದು ಲಕ್ಷ ರೂಪಾಯಿಯ ಆರೋಗ್ಯ ವಿಮೆಯನ್ನ ನೀಡುತ್ತಿದೆ. ಭಾರತದ 40 ಕೋಟಿ ಜನರಿಗೆ ಈ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ವಿಮೆಯನ್ನ ನೀಡಲಾಗಿದೆ. ಈ ಸೇವೆಯನ್ನ ಪಡೆಯೋಕೆ ಆಧಾರ್ ಕಾರ್ಡ್ ಅಗತ್ಯವೇ ಹೊರತು ಕಡ್ಡಾಯವಲ್ಲ ಅನ್ನೋ ವಿಚಾರವನ್ನ ಕೇಂದ್ರ ಸ್ಪಷ್ಟಪಡಿಸಿದೆ. ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಷನ್ ಆಧಾರ್ 7ನೇ ನೀತಿ ಸಂಹಿತೆ ಅಡಿಯಲ್ಲಿ ಅಧಿಸೂಚನೆಯನ್ನೂ ಪ್ರಕಟಿಸಿದೆ.

ಆ ಪ್ರಕಾರ ಆಯುಷ್ಮಾನ್ ಭಾರತದ ಸೇವೆಗಳನ್ನ ಪಡೆಯೋಕೆ ಸಾರ್ವಜನಿಕರು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಮನ್ರೇಗಾ ಕಾರ್ಡ್ ಸೇರಿದಂತೆ ಹಲವು ಸರ್ಕಾರಿ ಗುರುತಿನ ಚೀಟಿಗಳನ್ನ ಬಳಸಬಹುದಾಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದವರು ಕಂಡುಬಂದಲ್ಲಿ ಅವರನ್ನು ಹತ್ತಿರದ ಆಧಾರ್ ಕೇಂದ್ರಕ್ಕೆ ಕರೆದೊಯ್ದು ಹೆಸರು ನೋಂದಾಯಿಸಬೇಕಾದ ಜವಾಬ್ದಾರಿ ಸೇವಾದಾರದದ್ದೇ ಆಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...