alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಟಿಕೇಟ್ ಬುಕ್ ಮಾಡಲು ಆಧಾರ್ ಕಡ್ಡಾಯ…?

ಸದ್ಯ ಆಧಾರ್ ಕಾರ್ಡ್ ಅನ್ನೋದು ಎಲ್ಲದಕ್ಕೂ ಅತ್ಯಗತ್ಯ. ಯಾವುದೇ ಕೆಲಸಕ್ಕೆ ಹೋದರೂ ಆಧಾರ್ ಕೇಳುತ್ತಾರೆ. ಬಹುಶಃ ಇನ್ಮುಂದೆ ಆನ್ ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡಲೂ ಕೂಡ ಆಧಾರ್ ಬೇಕೇ ಬೇಕು.

ನೀವು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಪ್ರವಾಸೋದ್ಯಮ ನಿಗಮ ವೆಬ್ ಸೈಟ್ ಐ ಆರ್ ಸಿ ಟಿ ಸಿ ಮುಖಾಂತರ ರೈಲು ಟಿಕೆಟ್ ಬುಕ್ ಮಾಡುತ್ತೀರೆಂದಾದರೆ ಆಧಾರ್ ಕಾರ್ಡ್ ಅಗತ್ಯವಾಗಬಹುದು. ಈ ಹಿಂದೆ ನೀವು ಆಧಾರ್ ನಂಬರ್ ನೀಡದಿದ್ದರೂ ಟಿಕೆಟ್ ಬುಕ್ ಮಾಡಬಹುದಿತ್ತು.

ಇತ್ತೀಚಿಗೆ ಅಕ್ರಮ ಸಾಫ್ಟ್ ವೇರ್ ಬಳಸಿ ಹೊರ ಪ್ರದೇಶಗಳಿಗೆ ಹೋಗುವ ಬೇರೆ ಬೇರೆ ರೈಲುಗಳ ಟಿಕೆಟ್ ಕಾಯ್ದಿರಿಸಿ ಕಳ್ಳ ದಂಧೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು. ಈತ ಸುಮಾರು 5 ಸಾವಿರ ಜನರಿಗೆ ಈ ಸಾಫ್ಟ್ ವೇರ್ ಮಾರಾಟ ಮಾಡಿದ್ದ. ಈ ಬಳಿಕ ರೈಲ್ವೆ ರಕ್ಷಣಾ ದಳ, ರೈಲು ಟಿಕೆಟ್ ಕಾಯ್ದಿರಿಸಲು ಆಧಾರ್ ಕಡ್ಡಾಯಗೊಳಿಸುವಂತೆ ಸಲಹೆ ನೀಡಿತ್ತು. ಆದ್ದರಿಂದ ಸದ್ಯದಲ್ಲೇ ರೈಲು ಟಿಕೆಟ್ ಕಾಯ್ದಿರಿಸಲು ಆಧಾರ್ ಕಡ್ಡಾಯವಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...