alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಕಾರಣದಿಂದ ಸಾಧ್ಯವಾಗಿದೆ ಈ ಕಾರ್ಯ

ಮಾನಸಿಕ ಸಮಸ್ಯೆಯಿಂದ ಮನೆಯಿಂದ ದೂರಾದ 16 ಮಕ್ಕಳು ಆಧಾರ್ ಕಾರಣದಿಂದ ಅವರ ಮನೆಗೆ ಸೇಫ್ ಆಗಿ ತಲುಪಲು ಸಾಧ್ಯವಾಗಿದೆ. ಈ ಮಕ್ಕಳೆಲ್ಲ ಬೆಂಗಳೂರಿನ ರೈಲ್ವೆ ನಿಲ್ದಾಣಗಳು ಹಾಗೂ ಮೆಜೆಸ್ಟಿಕ್ ಪ್ರದೇಶದಲ್ಲಿ ವಿವಿಧ ಸ್ವಯಂಸೇವಾ ಸಂಸ್ಥೆಗಳು ರಕ್ಷಿಸಿದ ಮಕ್ಕಳು.

ಇತ್ತೀಚೆಗೆ ಮಧ್ಯಪ್ರದೇಶದ ಧೋಮ್ ಜಿಲ್ಲೆಯ 17 ವರ್ಷದ ಅರುಣ್ ತಿವಾರಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಬಳಿಕ ಆಧಾರ್ ಸಹಾಯದಿಂದ ಆತನ ಪೋಷಕರಾದ ಉದ್ಯಮಿ ಭರತ್ ಪ್ರಸಾದ್ ತಿವಾರಿಯವರ ಸುಪರ್ದಿಗೆ ನೀಡಲಾಗಿದೆ. ಮಾನಸಿಕ ಅಸ್ವಸ್ಥನಾಗಿದ್ದ ಆತನನ್ನು ಆಧಾರ್ ಸಹಾಯದಿಂದ ಅವನ ಮನೆ ವಿಳಾಸ ಪತ್ತೆ ಮಾಡಲಾಗಿತ್ತು.

ಇದೇ ರೀತಿ 2017ರಿಂದ ಇಲ್ಲಿವರೆಗೆ 16 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಮಕ್ಕಳ ಆಧಾರ್ ನೋಂದಣಿಯಾಗಿದ್ದರೆ ವಿಳಾಸ ಹುಡುಕುವ ಪ್ರಯತ್ನ ಮಾಡಲಾಗುತ್ತದೆ. ಆಧಾರ್ ಅಧಿಕಾರಿಗಳು ಸಹಕಾರ ನೀಡುತ್ತಾರೆ. ಅವರ ವಿಳಾಸದ ಭೌಗೋಳಿಕ ಮಾಹಿತಿ ಆಧರಿಸಿ ಮನೆ ಸೇರಿಸುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಈ ನಿಟ್ಟಿನಲ್ಲಿ ವಿಶೇಷ ಕೆಲಸ ಮಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...