alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಆಧಾರ್ ಕಡ್ಡಾಯ

ttd tru

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಖ್ಯಾತವಾಗಿರುವ ತಿರುಪತಿ ತಿರುಮಲ ದೇವಾಲಯಕ್ಕೆ, ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ. ಹೀಗೆ ಬರುವ ಭಕ್ತರು ಹರಕೆ ತೀರಿಸಿ, ಕಾಣಿಕೆ ಸಲ್ಲಿಸುತ್ತಾರೆ.

ತಿಮ್ಮಪ್ಪನ ಭಕ್ತರಿಗೆ ಒಂದು ಸುದ್ದಿ ಇಲ್ಲಿದೆ. ಇನ್ನು ಮುಂದೆ ತಿರುಪತಿ ತಿರುಮಲದ ದೇವಾಲಯದಲ್ಲಿ ಉರುಳು ಸೇವೆ(ಅಂಗ ಪ್ರದಕ್ಷಿಣೆ) ಮಾಡುವ ಭಕ್ತರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಜರುಪಡಿಸಬೇಕೆಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಉರುಳು ಸೇವೆ ಮಾಡುವ ಮೂಲಕ ಹೆಚ್ಚಿನ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ತೀರಿಸುತ್ತಾರೆ. ಹಲವಾರು ಭಕ್ತರು ಪದೇ, ಪದೇ ಉರುಳು ಸೇವೆಯಲ್ಲಿ ಪಾಲ್ಗೊಳ್ಳುವುದರಿಂದ ಬೇರೆ ಭಕ್ತರಿಗೆ ಅವಕಾಶ ಸಿಗದಂತಾಗಿದೆ.

ಈ ಹಿನ್ನಲೆಯಲ್ಲಿ ತಿರುಪತಿ ತಿರುಮಲ ದೇವಾಲಯದಲ್ಲಿ ಉರುಳು ಸೇವೆ ಮಾಡುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಉರುಳು ಸೇವೆಯ ಕೌಂಟರ್ ನಲ್ಲಿ ಚೀಟಿ ಕೊಡುವಾಗ ಭಕ್ತರ ಆಧಾರ್ ಮಾಹಿತಿ ದಾಖಲಿಸಿಕೊಳ್ಳಲಾಗುವುದು. ಇದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಉರುಳು ಸೇವೆ ಮಾಡಲು ಅನುಕೂಲವಾಗಲಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...