alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ ಮನೆಯವನ ಪ್ರೀತಿಗೆ ಬಿದ್ದ ಮಹಿಳೆ ಮಾಡಿದ್ಲು ಈ ಕೆಲಸ

ಪ್ರೀತಿ ಕುರುಡು ಎನ್ನುತ್ತಾರೆ. ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಪ್ರೀತಿ ಚಿಗುರಿದವರಿಗೆ ಜಗತ್ತು ಕಾಣೋದಿಲ್ಲ. ಈ ಎಲ್ಲ ಮಾತುಗಳು ಈ ಮಹಿಳೆಗೆ ಅನ್ವಯವಾಗುತ್ತೆ. ಎರಡು ಮಕ್ಕಳಿದ್ರೂ ಪಕ್ಕದ ಮನೆಯವನ ಪ್ರೀತಿಗೆ ಬಿದ್ದ ಮಹಿಳೆ ಗಂಡನ ವಿರುದ್ಧವೇ ದೂರು ನೀಡಿದ್ದಾಳೆ.

ಘಟನೆ ನಡೆದಿರುವುದು ಕಾನ್ಪುರದಲ್ಲಿ. 2006ರಲ್ಲಿ ಮಹಿಳೆಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿವೆ. ಈ ಮಧ್ಯೆ ಪಕ್ಕದ ಮನೆಯವನ ಮೇಲೆ ಮಹಿಳೆಗೆ ಪ್ರೀತಿ ಚಿಗುರಿದೆ. ಈ ಸಂಗತಿ ಪತಿಗೆ ಗೊತ್ತಾಗಿದೆ. ಪತಿ ಪತ್ನಿ ತಂದೆಗೆ ವಿಷ್ಯ ತಿಳಿಸಿದ್ದಾನೆ. ಆದ್ರೆ ಎಷ್ಟು ಹೇಳಿದ್ರೂ ಪತಿ ಮಾತು ಕೇಳದ ಪತ್ನಿ 2013ರಲ್ಲಿ ಪ್ರೇಮಿ ಜೊತೆ ಓಡಿಹೋಗಿದ್ದಳು. ಈ ಬಗ್ಗೆ ಪತಿ ದೂರು ನೀಡಿದ್ದ. ನಂತ್ರ ತಾನೇ ಮನೆಗೆ ಬಂದಿದ್ದ ಪತ್ನಿ ಮತ್ತೆ 2014ರಲ್ಲಿ ಪ್ರೇಮಿ ಜೊತೆ ಮನೆ ಬಿಟ್ಟಿದ್ದಳು.

ಇಷ್ಟೇ ಅಲ್ಲ ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಳು. ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಪತ್ನಿ ಮಾಡಿದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು ಕೋರ್ಟ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...