alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲೆಕೋರರಿಂದ ಪತಿ ರಕ್ಷಿಸಲು ರಿವಾಲ್ವರ್ ಹಿಡಿದ್ಲು ಪತ್ನಿ..!

ಲಕ್ನೋದ ಕಾಕೋರಿ ಪ್ರದೇಶದಲ್ಲಿ ಬಾಡಿಗೆದಾರ ಹಾಗೂ ಬಾಡಿಗೆ ಮನೆ ಮಾಲೀಕನ ನಡುವೆ ಗಲಾಟೆ ನಡೆದಿದೆ. ಬಲವಂತವಾಗಿ ಮನೆ ಖಾಲಿ ಮಾಡಿಸಲು ಮುಂದಾದ ಮನೆ ಮಾಲೀಕರ ಹಾಗೂ ಬಾಡಿಗೆದಾರನ ಮಧ್ಯೆ ಜಗಳ ನಡೆದಿದೆ. ಬಾಡಿಗೆದಾರನಿಗೆ  ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮನೆ ಹೊರಗೆ ಹಲ್ಲೆಕೋರರಿಂದ ಪತಿ ಒದೆ ತಿನ್ನುತ್ತಿರುವುದನ್ನು ನೋಡಿದ ಪತ್ನಿ ರಿವಾಲ್ವರ್ ಹಿಡಿದು ಹೊರಗೆ ಬಂದಿದ್ದಾಳೆ.

ರಿವಾಲ್ವರ್ ನಿಂದ ಗುಂಡು ಹಾರಿಸಿ ಹಲ್ಲೆಕೋರರನ್ನು ಓಡಿಸಿದ್ದಾಳೆ. ಬಾಡಿಗೆದಾರನ ವಿರುದ್ಧ ಹಲ್ಲೆ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಅತ್ತ ಬಾಡಿಗೆದಾರರು ಕೂಡ ಮನೆ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಅಬ್ದುಲ್ ಎಂಬಾತನ ಬಾಡಿಗೆ ಮನೆಯಲ್ಲಿ ಅಬಿದ್ ಹಾಗೂ ಆತನ ಪತ್ನಿ ಆಯೆಷಾ ವಾಸವಾಗಿದ್ದಾರೆ. ಅನೇಕ ತಿಂಗಳಿಂದ ಮನೆ ಬಾಡಿಗೆ ಹಾಗೂ ಕರೆಂಟ್ ಬಿಲ್ ನೀಡಿಲ್ಲ. ಮನೆ ತಮ್ಮದೆ ಎನ್ನುತ್ತಿದ್ದಾರೆ. ಮನೆ ಮಾಲೀಕ ಅಬ್ದುಲ್ ಮಗನ ಜೊತೆ ಅಬಿದ್ ಮನೆಗೆ ಹೋಗಿ ಮನೆ ಖಾಲಿ ಮಾಡುವಂತೆ ಕೇಳಿದ್ದಾನೆ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಮನೆ ಮಾಲೀಕನ ಸಂಬಂಧಿಕರು ಬಾಡಿಗೆದಾರನಿಗೆ ಹೊಡೆದಿದ್ದಾರೆ. ಇದನ್ನು ನೋಡಿ ರಿವಾಲ್ವರ್ ಹಿಡಿದು ಮನೆಯಿಂದ ಹೊರಗೆ ಬಂದ ಪತ್ನಿ ಮಾಲೀಕರ ಸಂಬಂಧಿಕರ ಮೇಲೆ ಗುಂಡು ಹಾರಿಸುವ ಯತ್ನ ನಡೆಸಿದ್ದಾಳೆ. ಮನೆಯಲ್ಲಿದ್ದ ಸಿಸಿ ಟಿವಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...