alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾಗೆ ಔತಣ ಕೂಟ ಏರ್ಪಡಿಸಿದ್ದವರೇನ್ಮಾಡಿದ್ದಾರೆ ಗೊತ್ತಾ?

amit-shah_650x400_41493793004

ಪಶ್ಚಿಮ ಬಂಗಾಳದ ಆ ಕುಟುಂಬ ವಾರದ ಹಿಂದಷ್ಟೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿತ್ತು. ಆದ್ರೆ ಈಗ ದಿಢೀರನೆ ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿದೆ. ಗೀತಾ ಹಾಗೂ ರಾಜು ಟಿಎಂಸಿ ಸದಸ್ಯತ್ವ ಪಡೆದಿದ್ದಾರೆ. ಅವರನ್ನು ಪ್ರವಾಸೋದ್ಯಮ ಸಚಿವ ಗೌತಮ್ ದೇಬ್ ಪಕ್ಷಕ್ಕೆ ಬರಮಾಡಿಕೊಂಡ್ರು.

raju-geeta-trinamool_650x400_81493793414

ಪಕ್ಷ ಬಲವರ್ಧನೆಗಾಗಿ ಕಳೆದ ವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ರು. ಈ ವೇಳೆ ನಕ್ಸಲ್ ಬರಿಯಲ್ಲಿರೋ ರಾಜು ಮಹಾಲಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ರಾಜು ಮನೆಯವರು ಅಮಿತ್ ಶಾಗೆ ಪಕ್ಕಾ ಸಸ್ಯಾಹಾರಿ ಅಡುಗೆಯನ್ನು ಮಾಡಿ ಬಡಿಸಿದ್ದರು. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕೂಡ ಔತಣದಲ್ಲಿ ಪಾಲ್ಗೊಂಡಿದ್ದರು.

ರಾಜು ಮಹಾಲಿ ಮತ್ತು ಗೀತಾಳನ್ನು ಅಪಹರಿಸಿ, ಬೆದರಿಸಿ ಟಿಎಂಸಿ ಪಕ್ಷಕ್ಕೆ ಸೇರಿಸಿಕೊಂಡಿದೆ ಅಂತಾ ಬಿಜೆಪಿ ಆರೋಪಿಸಿದೆ. ಇದನ್ನು ನಿರಾಕರಿಸಿರುವ ಗೀತಾ, ಮಮತಾ ಬ್ಯಾನರ್ಜಿ ಅವರ ಬಗೆಗಿನ ಅಭಿಮಾನದಿಂದ ತಾವೇ ಇಷ್ಟಪಟ್ಟು ಟಿಎಂಸಿ ಸೇರಿರೋದಾಗಿ ಹೇಳಿಕೊಂಡಿದ್ದಾರೆ. ರಾಜು ಪೇಂಟಿಂಗ್ ಕೆಲಸ ಮಾಡಿದ್ರೆ ಗೀತಾ ಹೊಲದಲ್ಲಿ ದುಡಿಯುತ್ತಾರೆ.

ನಿನ್ನೆ ಇಬ್ಬರೂ ಕೆಲಸಕ್ಕೆ ಹೋಗಿದ್ದಾರೆ ಎಂದುಕೊಂಡಿದ್ದ ಗ್ರಾಮಸ್ಥರಿಗೆ ಅವರು ಟಿಎಂಸಿ ಸೇರಿದ ಸುದ್ದಿ ಕೇಳಿ ಅಚ್ಚರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ದೀದಿ ದರ್ಬಾರ್ ಗೆ ಬ್ರೇಕ್ ಹಾಕೋದಾಗಿ ಅಮಿತ್ ಶಾ ಸವಾಲು ಹಾಕಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಉಭಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...