alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ನಿಂದಲೇ ನಿರ್ಮಾಣವಾಗ್ತಿದೆ ಈ ರಸ್ತೆ…!

ನೀವು ಟಾರ್ ರೋಡ್, ಸಿಮೆಂಡ್ ರೋಡ್, ಮಡ್ ರೋಡ್ ಇವನ್ನೆಲ್ಲಾ ಕೇಳಿರ್ತೀರಾ. ಆದ್ರೆ ಪ್ಲಾಸ್ಟಿಕ್ ರೋಡ್ ಎಲ್ಲಾದ್ರೂ ಕೇಳಿದ್ದೀರಾ…? ಮೇಘಾಲಯದಲ್ಲಿ ಇಂಥದ್ದೊಂದು ರೋಡ್ ನಿರ್ಮಾಣವಾಗುತ್ತಿದೆ.

ಹೌದು….ನಾವು ಉಪಯೋಗಿಸುವ ಪ್ಲಾಸ್ಟಿಕ್ ನಿಂದಾಗಿ ನಿಸರ್ಗ ಹಾಳಾಗುತ್ತಿದೆ. ಪ್ರಾಣಿಗಳು ಸಾಯುತ್ತಿವೆ, ಭೂಮಿ ಬರಡಾಗುತ್ತಿದೆ. ಇದನ್ನು ಆಲೋಚಿಸಿದ ಮಧುರೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮೆಸ್ಟ್ರಿ ಪ್ರೊಫೆಸರ್ ಆಗಿರುವ ರಾಜಗೋಪಾಲನ್ ವಾಸುದೇವನ್ ಪ್ಲಾಸ್ಟಿಕ್ ಅನ್ನೇ ಹಾಕಿ ರೋಡ್ ಮಾಡುವ ಬಗ್ಗೆ ಆಲೋಚಿಸಿದರು ಹಾಗೂ ಅದನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ ಅದನ್ನು ಜಾರಿಗೊಳ್ಳುವಂತೆ ಮಾಡಿದರು.

ಮೇಘಾಲಯದಲ್ಲಿ ನರೇಗಾ ಹಾಗೂ ಮೇಘಾ ಲ್ಯಾಂಪ್ ಜೊತೆಗೂಡಿ ಟಾರ್ ಜೊತೆಗೆ ಈ ಪ್ಲಾಸ್ಟಿಕ್ ಅನ್ನೂ ಸೇರಿಸಿ ಒಂದು ಕಿ.ಮೀ. ಉದ್ದದ ಪ್ಲಾಸ್ಟಿಕ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 470 ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಕಪ್ಸ್, ಚಿಪ್ಸ್ ಪ್ಯಾಕೆಟ್ಸ್, ಪ್ಲಾಸ್ಟಿಕ್ ಬಾಟಲ್ಸ್ ಮುಂತಾದವನ್ನು ಇದಕ್ಕೆ ಬಳಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...