alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಡೆತ ತಪ್ಪಿಸಿಕೊಳ್ಳಲು ಪ್ರೇಮಿಯನ್ನು ತಬ್ಬಿ ಹಿಡಿದ್ಲು ವಿವಾಹಿತೆ

ಉತ್ತರ ಪ್ರದೇಶ ಆಗ್ರಾದ ಖಂಡೌಲಿ ಪ್ರದೇಶದ ಆಗ್ರಾ-ಅಲೀಗಡ ಹೆದ್ದಾರಿಯಲ್ಲಿ ಪತಿ, ಪತ್ನಿ ಮತ್ತು ಆತನ ಬೀದಿ ಜಗಳವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಪ್ರೇಮಿ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ಹೆದ್ದಾರಿಯಲ್ಲಿ ಪತಿ ಹಾಗೂ ಆತನ ಸಂಬಂಧಿಕರು ಹಿಡಿದಿದ್ದಾರೆ. ದಾರಿ ಮಧ್ಯೆಯೇ ಕಿತ್ತಾಟ, ಕಿರುಚಾಟ ನಡೆದಿದೆ.

ಪತಿ ಹಾಗೂ ಆತನ ಸಂಬಂಧಿಕರು ಪ್ರೇಮಿ ಜೋಡಿಗೆ ಥಳಿಸಿದ್ದಾರೆ. ಹೊಡೆತ ತಪ್ಪಿಸಿಕೊಳ್ಳಲು ಓಡುವ ಬದಲು ಜೋಡಿಗಳು ಗಟ್ಟಿಯಾಗಿ ತಬ್ಬಿ ನಿಂತಿದ್ದರು. ನಂತ್ರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದ್ರು. ಮೇ 15 ರಂದು ಮಹಿಳೆ ಪಕ್ಕದ ಮನೆಯವನ ಜೊತೆ ಓಡಿ ಹೋಗಿದ್ದಳು. 27 ಸಾವಿರ ರೂಪಾಯಿ ನಗದು, ಎರಡು ಬಂಗಾರದ ಉಂಗುರವನ್ನು ತೆಗೆದುಕೊಂಡು ಹೋಗಿದ್ದಳು. ಪತಿ, ಪತ್ನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.

ಶುಕ್ರವಾರ ಪತಿಗೆ ಪತ್ನಿ ಪ್ರೇಮಿ ಜೊತೆ ಬರ್ತಿದ್ದಾಳೆಂಬ ಮಾಹಿತಿ ಸಿಕ್ಕಿದೆ. ಅಲ್ಲಿಗೆ ಬಂದ ಪತಿ ಇಬ್ಬರನ್ನೂ ಹಿಡಿದಿದ್ದಾನೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...