alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿಗೆ ಆಹಾರವಾದ್ಲು ತೋಟಕ್ಕೆ ಹೋದ ಮಹಿಳೆ

ಲಕ್ನೋದ ಕತರ್ಣಿಘಾಟ್ ಕಾಡಿನಲ್ಲಿ ಹುಲಿಯೊಂದಕ್ಕೆ ಮಹಿಳೆ ಆಹಾರವಾಗಿದ್ದಾಳೆ. ಮಹಿಳೆ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮಹಿಳೆ ಶವ ಕಾಡಿನಲ್ಲಿ ಸಿಕ್ಕಿದೆ.

ಶವ ಸಿಕ್ಕ ಜಾಗದಲ್ಲಿ ಹುಲಿಯ ಹೆಜ್ಜೆ ಗುರುತಿದೆ. ಇದ್ರಿಂದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದೆ ಎಂದು ಅಂದಾಜಿಸಲಾಗಿದೆ. ಮಹಿಳೆ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಮಹಿಳೆ ಕಾಡಿನ ಸಮೀಪವಿರುವ ತೋಟಕ್ಕೆ ಕೆಲಸಕ್ಕೆ ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ಹುಲಿ ಆಕ್ರಮಣ ಮಾಡಿರುವ ಸಾಧ್ಯತೆಯಿದೆ. ಮಹಿಳೆ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಕಾಡುಗಳ ಸಂಖ್ಯೆ ಕಡಿಮೆಯಾಗ್ತಿದೆ. ಕಾಡು ನಾಡಾಗ್ತಿದ್ದು, ಕಾಡಿನ ಪ್ರಾಣಿಗಳು ನಾಡಿಗೆ ಬರ್ತಿವೆ. ಕಾಡಿನ ಸಮೀಪ ವಾಸವಾಗಿರುವ ಜನರು ಪ್ರಾಣ ಕೈನಲ್ಲಿ ಹಿಡಿದು ಓಡಾಡುವಂತಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...