alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ ಭವನದಲ್ಲಿ ನಡೆದಿದೆಯಂತೆ ಕಳ್ಳತನ

parliament_3344ಸಂಸತ್ ಭವನದಲ್ಲಿನ ಭದ್ರತಾ ಲೋಪಗಳನ್ನು ಎತ್ತಿ ತೋರಿಸಲು ಆಮ್ ಆದ್ಮಿ ಪಾರ್ಟಿ ಸಂಸದ ಭಗವಂತ್ ಮಾನ್, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಳಿಕ ಅದು ವಿವಾದಕ್ಕೆ ಕಾರಣವಾಗಿರುವುದರ ಮಧ್ಯೆ ಈಗ ನಡೆದಿರುವ ಮತ್ತೊಂದು ಘಟನೆ ಸಂಸತ್ ಭವನದ ಭದ್ರತಾ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಸಂಸತ್ ಭವನದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿರಿಸಿದ್ದ 30 ಸಾವಿರ ರೂ. ನಗದು ಕಳುವಾಗಿರುವುದಾಗಿ ಹೇಳಲಾಗಿದೆ. ಟಿಎಂಸಿ ಸಂಸದೆ ರತ್ನಾ ಡೇ ನಾಗ್, ಪಕ್ಷಕ್ಕಾಗಿ ಈ ಹಣವನ್ನು ಸಂಗ್ರಹಿಸಿದ್ದು, ಲಾಕ್ ಮಾಡಿ ಇಟ್ಟಿದ್ದರೆಂದು ತಿಳಿದುಬಂದಿದೆ.

ಹೀಗಿದ್ದರೂ ಹಣ ಕಳುವಾಗಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲವಾದರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಅತಿ ಹೆಚ್ಚಿನ ಭದ್ರತೆಯನ್ನು ಹೊಂದಿರುವ ಸಂಸತ್ ಭವನದಲ್ಲಿಯೇ ಕಳ್ಳತನ ನಡೆದಿರುವುದು ಅಚ್ಚರಿಯ ಸಂಗತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...