alex Certify
ಕನ್ನಡ ದುನಿಯಾ       Mobile App
       

Kannada Duniya

ದಿಢೀರ್ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡ ಟ್ಯಾಂಕರ್ ಚಾಲಕ

flood

ಜಮ್ಮು ಕಾಶ್ಮೀರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಪ್ರವಾಹದ ಹೊಡೆತಕ್ಕೆ ಹಲವು ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜಮ್ಮುವಿನ ಜಾಜ್ಜರ್ ಕೋಟ್ಲಿ ಪ್ರದೇಶದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಟ್ಯಾಂಕರ್ ಚಾಲಕನೊಬ್ಬ ಸಿಕ್ಕಿಹಾಕಿಕೊಂಡಿದ್ದ.

ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಏರಿಕೆಯಾಗಿದ್ರಿಂದ ಟ್ಯಾಂಕರ್ ಕೊಚ್ಚಿ ಹೋಗಲಾರಂಭಿಸಿತ್ತು. ಅದರಲ್ಲಿ ಸಿಲುಕಿದ್ದ ಚಾಲಕ ದಾನಿಶ್ ಗೆ ಹೇಗೆ ಬಚಾವ್ ಆಗ್ಬೇಕು ಅನ್ನೋದೇ ಗೊತ್ತಾಗದಂತಹ ಸ್ಥಿತಿ. ಟ್ಯಾಂಕರ್ ಪೂರ್ತಿ ನೀರಲ್ಲಿ ಮುಳುಗಿಬಿಟ್ರೆ ಚಾಲಕ ಕೂಡ ಕೊಚ್ಚಿ ಹೋಗ್ತಾ ಇದ್ದ.

ಹೇಗೋ ಡ್ರೈವರ್ ಸೀಟಿನಿಂದ ಹೊರಬಂದ ಚಾಲಕ ಮೇಲೆ ಹತ್ತಿ ಕುಳಿತ. ಸಾಕಷ್ಟು ಕಸರತ್ತು ಮಾಡಿ ರಕ್ಷಣಾ ಸಿಬ್ಬಂದಿ ಚಾಲಕನನ್ನು ಅಲ್ಲಿಂದ ಬಚಾವ್ ಮಾಡಿದ್ದಾರೆ. ಜಾಜ್ಜರ್ ನಲ್ಲಿ ಚಿಕ್ಕ ನದಿಯೊಂದು ಹರಿಯುತ್ತದೆ. ಅಲ್ಲಿ ಯಾವಾಗ್ಲೂ ಜನ ಗಾಡಿಗಳನ್ನು ಸ್ವಚ್ಛಗೊಳಿಸಲು ಬರುತ್ತಾರೆ.

ದಾನಿಶ್ ಕೂಡ ಬೆಳಗ್ಗೆ ವಾಹನ ಸ್ವಚ್ಛ ಮಾಡಲು ನದಿಗೆ ಬಂದಿದ್ದ. ಭಾರೀ ಮಳೆಯಿಂದಾಗಿ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಟ್ಯಾಂಕರ್ ಜೊತೆಗೆ ಚಾಲಕ ಕೂಡ ಸಿಕ್ಕಿಹಾಕಿಕೊಂಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...