alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಮಿಕ ವೃತ್ತಿಯಿಂದ ಯಶಸ್ವಿ ಎಂಜಿನಿಯರ್ ಆಗಿ ಬದಲಾದ ಶ್ರಮಜೀವಿ

23 ವರ್ಷದ ದಿಲೀಪ್ ಶನ್ನಿ ಬಿಹಾರದ ಬಡ ಕಾರ್ಮಿಕನಾಗಿದ್ದ. ಆದ್ರೆ ಈಗ ಸಿಂಗಾಪುರದಲ್ಲಿ ಆರಾಮದಾಯಕ ಬದುಕು ನಡೆಸ್ತಿರೋ ಮೆಕ್ಯಾನಿಕಲ್ ಎಂಜಿನಿಯರ್. ಕಾರ್ಮಿಕ ವೃತ್ತಿಯಿಂದ ಎಂಜಿನಿಯರ್ ಆಗುವವರೆಗಿನ ಪ್ರಯಾಣ ಕಲ್ಲು ಮುಳ್ಳಿನ ಹಾದಿಯಾಗಿತ್ತು.

ದಿಲೀಪ್ ಹರ್ದಾ ಗ್ರಾಮದಲ್ಲಿ ಕೃಷಿ ಕೆಲಸ ಮಾಡ್ತಿದ್ದ. ತಿಂಗಳಿಗೆ 2000-3000 ರೂಪಾಯಿ ಸಂಪಾದನೆಯಲ್ಲೇ ಬದುಕು ಸಾಗುತ್ತಿತ್ತು. ಆದ್ರೆ ದಿಲೀಪ್ ಗೆ ಎಂಜಿನಿಯರ್ ಆಗಬೇಕು ಅನ್ನೋ ಕನಸು. ಅದನ್ನು ನನಸು ಮಾಡಿಕೊಳ್ಳಲು ಶೈಕ್ಷಣಿಕ ಸಾಲಕ್ಕಾಗಿ ಹತ್ತಾರು ಬ್ಯಾಂಕ್ ಗಳ ಕದ ತಟ್ಟಿದ್ದ.

ಕೊನೆಗೆ ಆತನ ಸಹೋದರ ವಿಜಯ್ ಶನ್ನಿ ಅಣ್ಣನ ನೆರವಿಗೆ ಬಂದಿದ್ದ. ಚೆನ್ನೈನ ಟೈಲ್ಸ್ ಯುನಿಟ್ ನಲ್ಲಿ ಕೆಲಸಕ್ಕೆ ಸೇರಿದ ವಿಜಯ್ ಅಣ್ಣನ ಶಿಕ್ಷಣಕ್ಕಾಗಿ ಹಣ ಸಹಾಯ ಮಾಡಿದ. ಬೆಳೆ ಕೊಯ್ಲು ಇಲ್ಲದ ಸಮಯದಲ್ಲಿ ದಿಲೀಪ್ ತಂದೆ ನೇಪಾಳದಲ್ಲಿ ಐಸ್ ಕ್ರೀಂ ಮಾರುತ್ತಿದ್ರು.

ಅದರಿಂದ ಬಂದ ಹಣವನ್ನು ಮಗನ ಓದಿಗಾಗಿ ಕಳಿಸಿಕೊಡುತ್ತಿದ್ರು. ಶಾಲಾ ಕಾಲೇಜಿಗೆ ರಜೆಯಿದ್ದಾಗ ದಿಲೀಪ್ ಕೂಡ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದ. ಎಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ 2016ರಲ್ಲಿ ಮಧ್ಯಪ್ರದೇಶ ಸರ್ಕಾರ ದಿಲೀಪ್ ಗೆ ಟಾಪರ್ ಅವಾರ್ಡ್ ಕೂಡ ನೀಡಿತ್ತು.

ಕಳೆದ ತಿಂಗಳು ಸ್ಟೀಲ್ ಕಂಪನಿಯೊಂದರಲ್ಲಿ ದಿಲೀಪ್ ಗೆ ಕೆಲಸ ಸಿಕ್ಕಿದೆ. 8 ಲಕ್ಷ ರೂಪಾಯಿ ವಾರ್ಷಿಕ ಸಂಬಳದೊಂದಿಗೆ ದಿಲೀಪ್ ನನ್ನು ಸಿಂಗಾಪುರಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ತನ್ನಂತೆ ಬಡ ಕುಟುಂಬದಲ್ಲಿ ಹುಟ್ಟಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಸಹಾಯ ಮಾಡುವುದು ದಿಲೀಪ್ ಕನಸು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...