alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಲರ್ ಹೇಳಿದ ಮಾಹಿತಿ ಕೇಳಿ ‘ಶಾಕ್’ ಆದ ಪೊಲೀಸರು

ಬೇಗನೆ ಹಣ ಮಾಡುವ ಉದ್ದೇಶದಿಂದ ಟೈಲರ್ ಒಬ್ಬ ಸೀರಿಯಲ್ ಕಿಲ್ಲರ್ ಆಗಿ ಬದಲಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಆದೇಶ್ ಕಾಂಬ್ರಾ ಎಂಬ 48 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಪೊಲೀಸರ ಮುಂದೆ ಆದೇಶ್ ಕಾಂಬ್ರಾ ಶಾಕಿಂಗ್ ಮಾಹಿತಿಯನ್ನು ತಿಳಿಸಿದ್ದಾನೆ. ಹಣದ ಆಸೆಗಾಗಿ ಆತ ಇದುವರೆಗೂ ಸುಮಾರು 29 ಟ್ರಕ್ ಡ್ರೈವರ್ ಗಳನ್ನ ಕೊಲೆ ಮಾಡಿರೋದಾಗಿ ತಿಳಿಸಿದ್ದಾನೆ.

ಸುಮಾರು 12ಕ್ಕೂ ಹೆಚ್ಚು ಅಂತರ್ ರಾಜ್ಯ ಕಳ್ಳರ ಗ್ಯಾಂಗ್ ನಲ್ಲಿ ಶಾಮೀಲಾಗಿ ಪಾತಕಗಳನ್ನು ಎಸಗಿರೋದಾಗಿ ಕಾಂಬ್ರಾ ಒಪ್ಪಿಕೊಂಡಿದ್ದಾನೆ. ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಢ್ ಮತ್ತು ಒಡಿಸ್ಸಾಗಳಲ್ಲಿ ಹೆಚ್ಚು ಕೊಲೆಗಳನ್ನ ಮಾಡಿರೋದಾಗಿ ತಿಳಿಸಿದ್ದಾನೆ.

ಮಧ್ಯ ಪ್ರದೇಶ ಒಂದರಲ್ಲೇ ಆತ 15 ಕೊಲೆಗಳನ್ನ ಮಾಡಿದ್ದಾನಂತೆ. ಮಹಾರಾಷ್ಟ್ರದಲ್ಲಿ 8, ಚತ್ತೀಸ್ ಗಢದಲ್ಲಿ 5 ಮತ್ತು ಓಡಿಸ್ಸಾದಲ್ಲಿ 2 ಕೊಲೆಗಳನ್ನ ಮಾಡಿರೋದಾಗಿ ಕಾಂಬ್ರಾ ಒಪ್ಪಿಕೊಂಡಿದ್ದಾನೆ. ಡಕಾಯಿತಿಯೊಂದಕ್ಕೆ ಹೊಂಚು ಹಾಕಿ ಕುಳಿತಿದ್ದ ವೇಳೆ ಪೊಲೀಸರು ಕಾಂಬ್ರಾ ಮತ್ತು ಆತನ ಇಬ್ಬರು ಸಹಚರರನ್ನ ಬಂಧಿಸಿದ್ದಾರೆ.

ವಿಚಾರಣೆಗೂ ಮೊದಲು ಪೊಲೀಸರಿಗೆ ಕಾಂಬ್ರಾನಿಂದ ಕಳ್ಳತನದ ಹೊರತಾಗಿ ಗಂಭೀರ ಅಪರಾಧ ನಡೆದಿರುವ ಸಾಧ್ಯತೆ ಇಲ್ಲ ಅಂತ ಭಾವಿಸಿದ್ದರಂತೆ. ಆದ್ರೆ ವಿಚಾರಣೆಯ ವೇಳೆ ಆತ ಒಂದೊಂದೇ ಮಾಹಿತಿಯನ್ನ ಹೊರಗೆಡವುತ್ತಿದ್ದ ಹಾಗೆ ಪೊಲೀಸರೇ ಶಾಕ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...