alex Certify
ಕನ್ನಡ ದುನಿಯಾ       Mobile App
       

Kannada Duniya

ಸುತ್ತಾಡಿಸುವ ನೆಪ ಹೇಳಿ ತಾಯಿಯನ್ನು ದಾರಿ ಮಧ್ಯೆ ಬಿಟ್ಟುಹೋದ

ಕಲಿಯುಗದಲ್ಲಿ ಯಾವ ಸಂಬಂಧಕ್ಕೂ ಬೆಲೆಯಿಲ್ಲ. ಹೆತ್ತ ತಾಯಿಯನ್ನೇ ಮಕ್ಕಳು ದೂರ ಮಾಡ್ತಿದ್ದಾರೆ. ಅನಾಥಾಲಯಕ್ಕೆ ಬಿಟ್ಟು ಬರ್ತಿದ್ದಾರೆ. ಉತ್ತರ ಪ್ರದೇಶದ ಗೋರಕ್ಪುರದಲ್ಲಿ ಮಗನೊಬ್ಬ ತಾಯಿಗೆ ಸುಳ್ಳು ಹೇಳಿ ಮನೆಯಿಂದ ಕರೆತಂದು ಮಧ್ಯ ದಾರಿಯಲ್ಲಿ ಬಿಟ್ಟು ಹೋಗಿದ್ದಾನೆ. ಮಗನ ಬರುವಿಕೆಯನ್ನು ಕಾದು ಕಾದು ಸುಸ್ತಾದ ವೃದ್ಧೆ ಅಂಗಡಿ ಮಾಲೀಕನೊಬ್ಬನ ನೆರವು ಪಡೆದಿದ್ದಾಳೆ.

ಸುಮನ್ ಎಂಬ ವೃದ್ಧೆಯನ್ನು ಹೊರಗಡೆ ಸುತ್ತಾಡಿಸುವುದಾಗಿ ಅಜಮ್ಘಡ್ ಮನೆಯಿಂದ ಮಗ ಪವನ್ ಕರೆದುಕೊಂಡು ಬಂದಿದ್ದಾನೆ. ನಂತ್ರ ಅಂಗಡಿಯೊಂದರ ಬಳಿ ತಾಯಿಗೆ ಕುಳಿತುಕೊಳ್ಳುವಂತೆ ಹೇಳಿ ಶಾಪಿಂಗ್ ನೆಪವೊಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಸಂಜೆ 5 ಗಂಟೆಯವರೆಗೆ ಮಗನಿಗಾಗಿ ಕಾದಿದ್ದಾಳೆ ವೃದ್ಧೆ. ನಂತ್ರ ಪಕ್ಕದ ಅಂಗಡಿಯವನಿಗೆ ಕಷ್ಟ ಹೇಳಿದ್ದಾಳೆ. ವಿಷ್ಯ ಪೊಲೀಸರ ಕಿವಿ ಮುಟ್ಟಿದ್ದು ವೃದ್ಧೆಯನ್ನು ಠಾಣೆಗೆ ಕರೆದೊಯ್ದ ಪೊಲೀಸರು ವೃದ್ಧೆ ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...