alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿಯಲ್ಲಿರಲ್ಲ ಮಾಲೀಕ ! ಸಿಸಿ ಟಿವಿಯೂ ಇಲ್ಲಿಲ್ಲ !!

a-shop-without-shopkeeper-and-a-cctvಅಂಗಡಿಯಲ್ಲಿ ಕಳ್ಳತನವಾಗಬಾರದೆಂದು ಮಾಲೀಕರು, ಸಿಸಿ ಟಿವಿ ಮುಂತಾದ ಭದ್ರತಾ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಸಾಮಾನ್ಯ. ಇಷ್ಟೆಲ್ಲ ಭದ್ರತೆ ಇದ್ದೂ ಒಮ್ಮೊಮ್ಮೆ ಕಳ್ಳತನ ನಡೆದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ಯಾವುದೇ ಭದ್ರತೆ ಇಲ್ಲದೆ ಸ್ವತಂತ್ರವಾಗಿ ನಂಬಿಕೆ, ಭರವಸೆಯ ಮೇಲೆ ನಡೆಯುತ್ತಿರುವ ಅಂಗಡಿಯೊಂದಿದೆ ಎಂದರೆ ನೀವು ನಂಬಲೇಬೇಕು.

ಮಿಜೋರಾಮ್ ನ ಒಂದು ಅಂಗಡಿಯಲ್ಲಿ ಮಾಲೀಕ ಹಾಗೂ ಕೆಲಸಗಾರರಿರುವುದಿಲ್ಲ. ಅಷ್ಟೇ ಏಕೆ ಸಿಸಿ ಟಿವಿಯೂ ಇಲ್ಲಿಲ್ಲ. ಯಾವ ಭದ್ರತಾ ವ್ಯವಸ್ಥೆ ಇಲ್ಲದಿದ್ದರೂ ಇಲ್ಲಿ ಕಳ್ಳತನವಾಗುವುದಿಲ್ಲ ಎಂಬುದು ಆಶ್ಚರ್ಯದ ಸಂಗತಿ. ರಾಜಧಾನಿಯಿಂದ 65 ಕಿ.ಮೀ. ದೂರದ ಹೆದ್ದಾರಿಯಲ್ಲಿರುವ ಈ ಅಂಗಡಿ ಕೃಷಿಕರಿಗೆ ಸೇರಿದೆ. ಕೃಷಿಕರು ಪ್ರತಿದಿನ ಮುಂಜಾನೆ ಪ್ಲಾಸ್ಟಿಕ್ ಕವರ್ ಗಳಲ್ಲಿ ತುಂಬಿದ ತರಕಾರಿಗಳನ್ನು ಬಿದಿರಿನ ಕೋಲಿಗೆ ತೂಗುಹಾಕುತ್ತಾರೆ. ತರಕಾರಿಗಳ ಬೆಲೆಗಳನ್ನು ಕೂಡ ಅಲ್ಲೇ ಬರೆದಿಡುತ್ತಾರೆ. ಹಣದ ಡಬ್ಬಿಗಳು ಕೂಡ ಅಲ್ಲೇ ಇರುತ್ತವೆ.

ದಾರಿಯಲ್ಲಿ ಹಾದು ಹೋಗುವ ಪ್ರಯಾಣಿಕರು ತಮಗೆ ಬೇಕಾದ ತರಕಾರಿಗಳನ್ನು ತೆಗೆದುಕೊಂಡು ಹಣವನ್ನು ಡಬ್ಬಿಗೆ ಹಾಕಿ ಹೋಗುತ್ತಾರೆ. ಒಮ್ಮೆ ಹೆಚ್ಚಿನ ಹಣವನ್ನು ವಾಪಸ್ ಪಡೆಯಬೇಕೆಂದರೆ ಚಿಲ್ಲರೆ ನಾಣ್ಯಗಳನ್ನು ಕೂಡ ಅಲ್ಲೇ ಇಟ್ಟಿರುತ್ತಾರೆ. ಒಟ್ಟಿನಲ್ಲಿ ನಂಬಿಕೆಯ ಮೇಲೆ ನಿಂತ ಈ ಅಂಗಡಿ ಗ್ರಾಹಕರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...