alex Certify
ಕನ್ನಡ ದುನಿಯಾ       Mobile App
       

Kannada Duniya

ಚಾರ್ಜ್ ಗೆ ಹಾಕಿದ್ದ ಸ್ಯಾಮ್ಸಂಗ್ ಮೊಬೈಲ್ ಸ್ಟೋಟ…!

ಅಮೆರಿಕಾದಲ್ಲಿ ಮೊನ್ನೆಯಷ್ಟೇ ಸ್ಯಾಮ್ಸಂಗ್ ವಾಷಿಂಗ್ ಮಷಿನ್ ಸ್ಟೋಟಗೊಂಡ ಬೆನ್ನಲ್ಲೇ, ಇದೀಗ ಸ್ಯಾಮ್ಸಂಗ್ ಮೊಬೈಲ್ ಸ್ಪೋಟವಾದ ಘಟನೆ ಭಾರತದಲ್ಲಿ ನಡೆದಿದೆ.

ವತ್ಸಲ್ ಗುಪ್ತಾ ಎಂಬುವವರು ತಮ್ಮ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7  ಮೊಬೈಲ್ ಚಾರ್ಜ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಪೋಟಿಸಿದೆ. ಇದ್ರಿಂದ ವತ್ಸಲ್ ಗುಪ್ತಾ ಕೈಗಳಿಗೆ ಸುಟ್ಟ ಗಾಯವಾಗಿದೆ.

ಸುಟ್ಟು ಕರಕಲಾದ ಮೊಬೈಲ್ ನ ಚಿತ್ರಗಳನ್ನು ಟ್ವಿಟರ್ ನಲ್ಲಿ ಹಾಕಿ ಗುಪ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಟ್ಟ ಸ್ಯಾಮ್ಸಂಗ್ ಫೋನ್ ನನ್ನು ದುರಸ್ಥಿಗಾಗಿ ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋದ್ರೂ, ಅಲ್ಲಿ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ತಮ್ಮ ಫೋನ್ ಗಾಗಿ ಪ್ರತಿ ದಿನ ಸರ್ವಿಸ್ ಸೆಂಟರ್ ಗೆ ಫೋನ್ ಮಾಡಿದ್ರೂ ಪ್ರಕರಣವನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದು ನನಗೆ ತುಂಬಾ ಬೇಸರ ತರಿಸಿದೆ ಎಂದು ಗುಪ್ತಾ ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಮೊಬೈಲ್ ಸ್ಪೋಟ ಪ್ರಕರಣಗಳು ಆಗಾಗ ನಡೆದ ಘಟನೆಗಳು ನಮ್ಮ ಕಣ್ಣ ಮುಂದಿವೆ. ಈ ಹಿಂದೆ ಕೆಲ ರೆಡ್ಮಿ ಮೊಬೈಲ್ ಗಳು ಸ್ಪೋಟಗೊಂಡಿದ್ದು ವರದಿಯಾಗಿತ್ತು. ಅದೇನೇ ಇರಲಿ ಮೊಬೈಲ್ ಗಳನ್ನ ಚಾರ್ಜ್ ಗೆ ಹಾಕಿ ಮಾತನಾಡುವುದು ಅಪಾಯ ಅನ್ನೋದು ತಿಳಿದಿರಲಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...