alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ 10 ರ ಪೈಕಿ 9 ಮನೆಯಲ್ಲಿದೆ ಎಲ್‍ಪಿಜಿ ಸಂಪರ್ಕ

ದೇಶದಲ್ಲಿ ನಾಲ್ಕೇ ವರ್ಷದಲ್ಲಿ ಎಲ್‍ಪಿಜಿ ಬಳಕೆದಾರರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಸದ್ಯ ಪತ್ರಿ 10 ರ ಪೈಕಿ 9 ಮನೆಯಲ್ಲಿ ಎಲ್‍ಪಿಜಿ ಸಂಪರ್ಕ ಇದೆ. ಆ ಮೂಲಕ ದೇಶದ ಶೇ. 89 ರಷ್ಟು ಮನೆಗಳಲ್ಲಿ ಎಲ್‍ಪಿಜಿ ಬಳಕೆ ಆಗುವಂತಾಗಿದೆ.

ತೈಲ ಕಂಪನಿಗಳು 2015ರ ಏಪ್ರಿಲ್‍ನಿಂದ ದೇಶಾದ್ಯಂತ 10 ಕೋಟಿ ಗ್ರಾಹಕರನ್ನು ಸೇರಿಸಿಕೊಂಡು, ಗ್ರಾಹಕರ ಸಂಖ್ಯೆಯಲ್ಲಿ ಮೂರನೇ ಎರಡು ಭಾಗದಷ್ಟು ಹೆಚ್ಚಳ ಮಾಡಿಕೊಂಡು, ಅವರೆಲ್ಲ ಎಲ್‍ಪಿಜಿ ಬಳಸುವಂತೆ ಮಾಡಿದೆ. ಹೀಗಾಗಿ 2015ರ ಏಪ್ರಿಲ್‍ನಲ್ಲಿ ದೇಶದಲ್ಲಿ ಶೇ. 56.2ರಷ್ಟಿದ್ದ ಎಲ್‍ಪಿಜಿ ಬಳಕೆದಾರರ ಪ್ರಮಾಣ ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ ಶೇ. 89ಕ್ಕೆ ತಲುಪಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಿರತ ಪ್ರಯತ್ನವೇ ಈ ಬೆಳವಣಿಗೆಗೆ ಕಾರಣ. ಕೇಂದ್ರ ಸರ್ಕಾರ ಎಲ್‍ಪಿಜಿ ಬಳಕೆ ಜನಪ್ರಿಯವಾಗಿಸುವ ಜೊತೆಗೆ ಬಡ ಕುಟುಂಬಗಳಿಗೂ ಎಲ್‍ಪಿಜಿ ಸಂಪರ್ಕ ಸಿಗುವಂತೆ ಮಾಡಿರುವುದರಿಂದ ಈ ಹೆಚ್ಚಳ ಉಂಟಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...